Thursday, May 14, 2026
Google search engine
Homeಕ್ರೀಡೆWPL ಮುಂಬೈಗೆ ಸೋಲುಣಿಸಿದ ಯುಪಿ ವಾರಿಯರ್ಸ್!

WPL ಮುಂಬೈಗೆ ಸೋಲುಣಿಸಿದ ಯುಪಿ ವಾರಿಯರ್ಸ್!

ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಫೊಬೆ ಲಿಚ್ ಫೀಲ್ಡ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಉತ್ತರ ಪ್ರದೇಶ ವಾರಿಯರ್ಸ್ ತಂಡ ವನಿತೆಯರ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 22 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದೆ.

ನವೀ ಮುಂಬೈನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 187 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.

ಮುಂಬೈ ಇಂಡಿಯನ್ಸ್ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. 6ನೇ ಕ್ರಮಾಂಕದಲ್ಲಿ ಆಡಲು ಬಂದ ಅಮೆಲಾ ಕೇರ್ 28 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 49 ರನ್ ಬಾರಿಸಿ 1 ರನ್ ನಿಂದ ಅರ್ಧಶತಕದಿಂದ ವಂಚಿತರಾದರು.

ಅಮನ್ ಜ್ಯೋತ್ ಸಿಂಗ್ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 41 ರನ್ ಗಳಿಸಿದರು. 6ನೇ ವಿಕೆಟ್ ಗೆ ಅಮತ್ ಮತ್ತು ಅಮೆಲಾ ಜೋಡಿ 83 ರನ್ ಜೊತೆಯಾಟ ನಿಭಾಯಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡ ಆರಂಭಿಕ ಆಘಾತಕ್ಕೆ ಒಳಗಾದರೂ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಫೋಬೆ ಫೀಲ್ಡ್ 2ನೇ ವಿಕೆಟ್ ಗೆ 119 ರನ್ ಪೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಲ್ಯಾನಿಂಗ್ 45 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 70 ರನ್ ಸಿಡಿಸಿದರೆ, ಫೋಬೆ 37 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 61 ರನ್ ಚಚ್ಚಿದರು. ಇವರಿಬ್ಬರ ನಿರ್ಗಮನದ ನಂತರ ಹಾರ್ಲಿನ್ ಡಿಯೊಲ್ (25) ಮತ್ತು ಚೊಲೆ ಟಿಯೊನ್ (21) ಉತ್ತಮ ಮೊತ್ತ ದಾಖಲಿಸಿದರೂ ನಂತರ ನಾಟಕೀಯ ಕುಸಿತಕ್ಕೆ ಒಳಗಾಗಿ 200ರ ಗಡಿ ತಲುಪುವಲ್ಲಿ ವಿಫಲವಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments