ಗಾಜಿಯಾಬಾದ್: ಆರ್ ಸಿಬಿ ತಂಡದ ವೇಗದ ಬೌಲರ್ ಯಶ್ ದಯಾಳ್, ಲೈಂಗಿಕ ಶೋಷಣೆ ಆರೋಪದಿಂದ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗಾಜಿಯಾಬಾದ್ನ ಮಹಿಳೆಯೊಬ್ಬರು ದಯಾಳ್ ವಿರುದ್ಧ ಶಾದಿಯ ಆಮಿಷದಡಿಯಲ್ಲಿ ಐದು ವರ್ಷಗಳ ಕಾಲ ದೈಹಿಕ, ಮಾನಸಿಕ ಮತ್ತು ಆರ್ಥಿಕ ಶೋಷಣೆ ಮಾಡಿದ ಆರೋಪದಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಮಹಿಳೆಯ ದೂರಿನ ಪ್ರಕಾರ, ತಾವು 2021ರಿಂದ ದಯಾಳ್ ಜೊತೆ ಸಂಬಂಧದಲ್ಲಿದ್ದು, ಅವರು ಶಾದಿಯ ಭರವಸೆ ನೀಡಿ ತನ್ನನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಥರ್ಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಯಾಳ್ ಪ್ರತಿದೂರು
ದಯಾಳ್, ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಜುಲೈ 9, 2025ರಂದು ಪ್ರಯಾಗ್ರಾಜ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.
ದೂರಿನಲ್ಲಿ, ಮಹಿಳೆಯು ತನ್ನಿಂದ ಲಕ್ಷಗಟ್ಟಲೇ ಹಣವನ್ನು ವೈದ್ಯಕೀಯ ಮತ್ತು ಶಾಪಿಂಗ್ಗಾಗಿ ಕಾರಣ ಹೇಳಿ ಕೇಳಿದ್ದು, ಜೊತೆಗೆ ತನ್ನ ಐಫೋನ್ ಮತ್ತು ಲ್ಯಾಪ್ಟಾಪ್ ಕದ್ದಿದ್ದಾರೆ. ದಯಾಳ್, ತಾವು 2021ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಈ ಮಹಿಳೆಯನ್ನು ಭೇಟಿಯಾಗಿದ್ದೇವೆ ಎಂದು ಹೇಳಿದ್ದಾರೆ.
ನಿಷೇಧ ಭೀತಿ
2021ರಲ್ಲಿ ಜಾರಿಗೆ ಬಂದ ಬಿಸಿಸಿಐನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (ಪಿಒಎಸ್ಎಚ್) ನೀತಿಯು ಆಟಗಾರರನ್ನು ಒಳಗೊಂಡಿದ್ದು, ಈ ಆರೋಪಗಳು ಸಾಬೀತಾದರೆ ದಯಾಳ್ ಬಿಸಿಸಿಐ-ಅನುಮೋದಿತ ಎಲ್ಲಾ ಚಟುವಟಿಕೆಗಳಿಂದ ನಿಷೇಧವನ್ನು ಎದುರಿಸಬೇಕಾಗಬಹುದು.
ಇನ್ನು ಆರ್ಸಿ ತಂಡವು ತನ್ನ ಬ್ರಾಂಡ್ ಇಮೇಜ್ ಮತ್ತು ಸ್ಪಾನ್ಸರ್ಗಳ ಒತ್ತಡದಿಂದ ದಯಾಳ್ರನ್ನು ತಾತ್ಕಾಲಿಕವಾಗಿ ತಂಡದಿಂದ ದೂರವಿಡಬಹುದು. ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಕೂಡ ಲೀಗ್ನ ಖ್ಯಾತಿಯನ್ನು ರಕ್ಷಿಸಲು ದಯಾಳ್ ಅವರನ್ನು ತಾತ್ಕಾಲಿಕವಾಗಿ ನಿಷೇಧಿಸಬಹುದಾಗಿದೆ.



