Saturday, May 16, 2026
Google search engine
Homeದೇಶಇಂದು ಭಾರತ್ ಬಂದ್: ಯಾವುದು ಇರುತ್ತೆ, ಯಾವುದು ಇರಲ್ಲ?

ಇಂದು ಭಾರತ್ ಬಂದ್: ಯಾವುದು ಇರುತ್ತೆ, ಯಾವುದು ಇರಲ್ಲ?

ನವದೆಹಲಿ: ಹತ್ತು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿರುವ ಭಾರತ್ ಬಂದ್ಗೆ ಸೇರಲು ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಜುಲೈ 9 ರ ಬುಧವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ.

ರೈತ ಗುಂಪುಗಳು ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಹೆಚ್ಚುವರಿ ಬೆಂಬಲದೊಂದಿಗೆ ಬ್ಯಾಂಕಿಂಗ್, ವಿಮೆ, ಸಾರಿಗೆ, ವಿದ್ಯುತ್ ಮತ್ತು ಅಂಚೆ ಕಾರ್ಯಾಚರಣೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಮುಷ್ಕರವು ಅಡ್ಡಿಪಡಿಸುವ ನಿರೀಕ್ಷೆಯಿದೆ.

ಮುಷ್ಕರದ ಹಿಂದಿನ ಕಾರಣವೇನು?

ಸಕರ್ಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾಪರ್ೊರೇಟ್ ಪರ ನೀತಿಗಳ ವಿರುದ್ಧದ ಪ್ರತಿಭಟನೆಯಾಗಿದೆ ಎಂದು ಜಂಟಿ ಟ್ರೇಡ್ ಯೂನಿಯನ್ ಫೋರಂ ತಿಳಿಸಿದೆ.

ಇದರಲ್ಲಿ ಸಾರ್ವಜನಿಕ ವಲಯದ ಘಟಕಗಳು ಮತ್ತು ಅಗತ್ಯ ಸೇವೆಗಳ ಖಾಸಗೀಕರಣ, ಖಾಯಂ ಉದ್ಯೋಗಗಳ ಹೊರಗುತ್ತಿಗೆ ಮತ್ತು ಯೂನಿಯನ್ ಚಟುವಟಿಕೆಗಳನ್ನು ದುರ್ಬಲಗೊಳಿಸುವ ಕಾನೂನುಗಳು ಸೇರಿವೆ
ಒಕ್ಕೂಟಗಳು ಈ ಹಿಂದೆ ಕೇಂದ್ರ ಕಾಮರ್ಿಕ ಸಚಿವಾಲಯಕ್ಕೆ 17 ಅಂಶಗಳ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದವು ಆದರೆ ಯಾವುದೇ ಅರ್ಥಪೂರ್ಣ ಮಾತುಕತೆ ನಡೆದಿಲ್ಲ ಎಂದು ಹೇಳುತ್ತವೆ.

27 ಲಕ್ಷ ವಿದ್ಯುತ್ ಕಾರ್ಮಿಕರ ಬೆಂಬಲ ದೊರೆಯಲಿದ್ದು, ಬ್ಯಾಂಕಿಂಗ್ ಮತ್ತು ವಿಮಾ ಸಿಬ್ಬಂದಿ, ಅಂಚೆ ನೌಕರರು ಮತ್ತು ಸಾರ್ವಜನಿಕ ಸಾರಿಗೆ ಸಿಬ್ಬಂದಿ ಕೆಲಸದಿಂದ ದೂರ ಉಳಿಯುವ ಸಾಧ್ಯತೆಯಿದೆ

ಯಾವುದು ಬಂದ್, ಯಾವುದಿಲ್ಲ?

ಸಾರ್ವಜನಿಕ ವಲಯದ ಮತ್ತು ಸಹಕಾರಿ ಬ್ಯಾಂಕುಗಳು (ಸೀಮಿತ ಅಥವಾ ಕಾಯರ್ಾಚರಣೆಗಳಿಲ್ಲ), ವಿಮಾ ಸೇವೆಗಳು (ಎಲ್ಐಸಿ, ಜಿಐಸಿ, ಖಾಸಗಿ ವಲಯದ ಸಿಬ್ಬಂದಿ ಭಾಗವಹಿಸುವಿಕೆ ಬದಲಾಗುತ್ತದೆ), ಅಂಚೆ ವಿತರಣೆ ಮತ್ತು ಆಯ್ದ ರಾಜ್ಯಗಳಲ್ಲಿ ವಿದ್ಯುತ್ ಪೂರೈಕೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಈ ಮಧ್ಯೆ ಶಾಲೆಗಳು ಮತ್ತು ಕಾಲೇಜುಗಳು (ರಾಜ್ಯ ಸರ್ಕಾರಗಳು ಇನ್ನೂ ಯಾವುದೇ ಮುಚ್ಚುವ ಆದೇಶಗಳನ್ನು ಹೊರಡಿಸಿಲ್ಲ), ಖಾಸಗಿ ಕಚೇರಿಗಳು ಮತ್ತು ತುರ್ತು ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments