Tuesday, May 19, 2026
Google search engine
Homeದೇಶ6ನೇ ತರಗತಿ ಅರ್ಧದಷ್ಟು ವಿದ್ಯಾರ್ಥಿಗಳಿಗೆ 10 ರವರೆಗಿನ ಮಗ್ಗಿ ಬರಲ್ಲ: ಕೇಂದ್ರ ಸಮೀಕ್ಷೆಯ ಆಘಾತಕಾರಿ ವರದಿ

6ನೇ ತರಗತಿ ಅರ್ಧದಷ್ಟು ವಿದ್ಯಾರ್ಥಿಗಳಿಗೆ 10 ರವರೆಗಿನ ಮಗ್ಗಿ ಬರಲ್ಲ: ಕೇಂದ್ರ ಸಮೀಕ್ಷೆಯ ಆಘಾತಕಾರಿ ವರದಿ

ನವದೆಹಲಿ: ದೇಶದ ಕಲಿಕಾ ವಿಧಾನದ ವಿರೋಧಾಭಾಸಗಳಿಗೆ ಕನ್ನಡಿ ಹಿಡಿದಂತೆ ಆರನೇ ತರಗತಿ ಓದುವ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳಿಗೆ 10ರವರೆಗಿನ ಮಗ್ಗಿ ಗೊತ್ತಿಲ್ಲ ಎಂಬ ಅಂಶ ಬಯಲಾಗಿದೆ.

3ನೇ ತರಗತಿಯ ಕೇವಲ 55% ವಿದ್ಯಾರ್ಥಿಗಳು 99 ರವರೆಗಿನ ಸಂಖ್ಯೆಗಳನ್ನು ಏರಿಕೆ ಅಥವಾ ಇಳಿಕೆ ಕ್ರಮದಲ್ಲಿ ಜೋಡಿಸಬಲ್ಲರಾದರೇ, 6ನೇ ತರಗತಿಯ ಕೇವಲ 53% ವಿದ್ಯಾರ್ಥಿಗಳಿಗೆ 10 ರವರೆಗಿನ ಗುಣಕಾರ ಟೇಬಲ್ಗಳು ಗೊತ್ತಿವೆ ಎಂದು ಶಿಕ್ಷಣ ಸಚಿವಾಲಯದ ಸಮೀಕ್ಷೆಯೊಂದು ಕಂಡುಕೊಂಡಿದೆ.

ಈ ಸಮೀಕ್ಷೆಯನ್ನು ಪಫರ್ಾಮೆನ್ಸ್ ಅಸೆಸ್ಮೆಂಟ್, ರಿವ್ಯೂ ಆಂಡ್ ಅನಾಲಿಸಿಸ್ ಆಫ್ ನಾಲೆಡ್ಜ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್ ರಾಷ್ಟ್ರೀಯ ಸವರ್ೆಕ್ಷಣ ಎಂದು ಕರೆಯಲಾಗಿದ್ದು, ಇದನ್ನು ಹಿಂದೆ ನ್ಯಾಷನಲ್ ಅಚೀವ್ಮೆಂಟ್ ಸರ್ವೇ ಎಂದು ಕರೆಯಲಾಗುತ್ತಿತ್ತು.

ಈ ಸಮೀಕ್ಷೆಯನ್ನು ಕಳೆದ ವರ್ಷ ಡಿಸೆಂಬರ್ 4 ರಂದು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 781 ಜಿಲ್ಲೆಗಳ 74,229 ಶಾಲೆಗಳಿಂದ 21,15,022 ವಿದ್ಯಾರ್ಥಿಗಳನ್ನು ಒಳಗೊಂಡಂತೆ, ಸಕರ್ಾರಿ ಮತ್ತು ಖಾಸಗಿ ಶಾಲೆಗಳ 3, 6 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳ ಮೇಲೆ ನಡೆಸಲಾಯಿತು.

ಸಮೀಕ್ಷೆಯ ಪ್ರಕಾರ, ಮೂರು ತರಗತಿಗಳಿಂದ ಒಟ್ಟು 1,15,022 ಮಕ್ಕಳನ್ನು ಮೌಲ್ಯಮಾಪನ ಮಾಡಲಾಯಿತು ಮತ್ತು 2,70,424 ಶಿಕ್ಷಕರು ಮತ್ತು ಶಾಲಾ ಮುಖಂಡರು ಪ್ರಶ್ನಾವಳಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

3ನೇ ತರಗತಿಯ ಕೇವಲ 55% ವಿದ್ಯಾರ್ಥಿಗಳು 99 ರವರೆಗಿನ ಸಂಖ್ಯೆಗಳನ್ನು ಏರಿಕೆ ಅಥವಾ ಇಳಿಕೆ ಕ್ರಮದಲ್ಲಿ ಜೋಡಿಸಬಲ್ಲರೆ, ಆದರೆ 58% ವಿದ್ಯಾಥರ್ಿಗಳು ಎರಡಂಕಿಯ ಸಂಖ್ಯೆಗಳ ಕೂಡುವಿಕೆ ಮತ್ತು ಕಳೆಯುವಿಕೆಯನ್ನು ಮಾಡಬಲ್ಲರೆ. 6ನೇ ತರಗತಿಯಲ್ಲಿ, ಕೇವಲ 53% ವಿದ್ಯಾರ್ಥಿಗಳು ಗಣಿತದ ಲೆಕ್ಕಾಚಾರ ತಿಳಿದವರಾಗಿದ್ದಾರೆ. ಅವುಗಳ ನಡುವಿನ ಸಂಬಂಧವನ್ನು ಗ್ರಹಿಸಬಲ್ಲರು, ಕನಿಷ್ಠ 10 ರವರೆಗಿನ ಕೂಡುವಿಕೆ ಮತ್ತು ಗುಣಕಾರ ಟೇಬಲ್ಗಳನ್ನು ತಿಳಿದಿದ್ದಾರೆ.

6ನೇ ತರಗತಿಯಲ್ಲಿ, ಭಾಷೆ ಮತ್ತು ಗಣಿತದ ಜೊತೆಗೆ `ನಮ್ಮ ಸುತ್ತಲಿನ ವಿಶ್ವ’ ಎಂಬ ಹೆಚ್ಚುವರಿ ವಿಷಯವನ್ನು ಪರಿಚಯಿಸಲಾಗಿದ್ದು, ಇದು ಪರಿಸರ ಮತ್ತು ಸಮಾಜವನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಗಣಿತದಲ್ಲಿ ಕಡಿಮೆ ಅಂಕ (46%) ಗಳಿಸಿದ್ದಾರೆ, ಭಾಷೆಯಲ್ಲಿ ಸರಾಸರಿ 57% ಮತ್ತು `ನಮ್ಮ ಸುತ್ತಲಿನ ವಿಶ್ವ’ ವಿಷಯದಲ್ಲಿ ರಾಷ್ಟ್ರೀಯವಾಗಿ 49% ಅಂಕ ಗಳಿಸಿದ್ದಾರೆ.

ಶಿಕ್ಷಣ ಸಚಿವಾಲಯದ ಅಧಿಕಾರಿಗಳ ಪ್ರಕಾರ, 50% ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಸರಿಯಾಗಿ ಉತ್ತರಿಸಲು ಸಾಧ್ಯವಾದ ಸಂದರ್ಭಗಳು ಕಲಿಕೆಯ ಕೊರತೆಯನ್ನು ಸೂಚಿಸುತ್ತವೆ. 9ನೇ ತರಗತಿಯಲ್ಲಿ, ಕೇಂದ್ರ ಸಕರ್ಾರಿ ಶಾಲೆಗಳ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ, ವಿಶೇಷವಾಗಿ ಭಾಷೆಯಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ.

ಖಾಸಗಿ ಶಾಲೆಗಳು ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಗಣಿತದಲ್ಲಿ ಕಡಿಮೆ ಅಂಕ ಗಳಿಸಿವೆ. ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಒಂದೇ ರೀತಿಯ ಫಲಿತಾಂಶಗಳನ್ನು ದಾಖಲಿಸಿವೆ, ಗಣಿತದಲ್ಲಿ ಕನಿಷ್ಠ ಪ್ರದರ್ಶನ ಕಂಡುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments