ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯ ಹಂತ ತಲುಪಿದ್ದು 1.11 ಕೋಟಿ ಜನರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಯಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮತ ಪರಿಷ್ಕರಣೆ ವಿವರಗಳನ್ನು ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಶೇ. 80ರಷ್ಟು ಎನ್ಯುಮರೇಷನ್ ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ರಾಜ್ಯದಲ್ಲಿ 1.11 ಕೋಟಿ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೆಸರು ಕೈಬಿಡದಿರಲು ಮತದಾರರು ಫಾರ್ಮ್-6 ಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದು ಈ ಪೈಕಿ 4.43 ಕೋಟಿ ಜನರು ಗಣತಿ ನಮೂನೆ ಭರ್ತಿ ಮಾಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇಕಡಾವಾರು ಅತಿ ಹೆಚ್ಚು ಮತದಾರರು ‘ASDDO’ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು
ಆಗಸ್ಟ್ 8 ರಂದು ಎಸ್‌ಐಆರ್ ಗಣತಿ ಪ್ರಕ್ರಿಯೆಯ ಒಂದು ಹಂತ ಮುಕ್ತಾಯಗೊಳ್ಳಲಿದೆ. ಗಣತಿ ನಮೂನೆ ಸಿಗದೇ ಇದ್ದವರು ಅಥವಾ ಸ್ಥಳಾಂತರಗೊಂಡ 80 ಲಕ್ಷಕ್ಕೂ ಹೆಚ್ಚು ಮತದಾರರು ಹೆದರುವ ಅಗತ್ಯವಿಲ್ಲ. ನೀವು ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ಫಾರ್ಮ್ – 6 (Form 6) ಭರ್ತಿ ಮಾಡುವ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.
ಒಟ್ಟು 57,787 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ರಾಜ್ಯದ 175 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.100ರಷ್ಟು ಮತ್ತು 49 ಕ್ಷೇತ್ರಗಳಲ್ಲಿ ಶೇ.90ರಿಂದ ಶೇ.100ರಷ್ಟು ಕೆಲಸಗಳು ಪೂರ್ಣಗೊಂಡಿವೆ. 19 ಜಿಲ್ಲೆಗಳು ಶೇ.100ರಷ್ಟು ಮತ್ತು 15 ಜಿಲ್ಲೆಗಳು ಶೇ. 90ರಿಂದ ಶೇ. 100ರಷ್ಟು ಕಾರ್ಯ ಮುಕ್ತಾಯವಾಗಿದೆ.



