Thursday, July 2, 2026
Google search engine
Homeಅಪರಾಧಎಂಎಲ್ ಸಿ ಶರವಣ ಜ್ಯೂವೆಲರಿಗೆ ಅಂಗಡಿಗೆ 1.25 ಕೆಜಿ ಚಿನ್ನ ವಂಚನೆ

ಎಂಎಲ್ ಸಿ ಶರವಣ ಜ್ಯೂವೆಲರಿಗೆ ಅಂಗಡಿಗೆ 1.25 ಕೆಜಿ ಚಿನ್ನ ವಂಚನೆ

ಜೆಡಿಎಸ್ ಎಂಎಲ್ ಸಿ ಟಿಎ ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ ಚಿನ್ನಾಭರಣಗಳನ್ನು ಪಡೆದು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಾಲ್ ಮಾರ್ಕ್ಸ್ ಸೀಲ್ ಹಾಕಲು ನೀಡಿದ್ದ 1.249 ಕೆ.ಜಿ ತೂಕದ ಚಿನ್ನಾಭರಣ ವಂಚಿಸಲಾಗಿದೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ ಮ್ಯಾನೇಜರ್ ನೀಡಿದ ದೂರಿನನ್ವಯ ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

ಕಳೆದ ಜನವರಿ 14ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ 1 ಕೆಜಿ 249 ಗ್ರಾಂ ಚಿನ್ನದ ಆಭರಣಗಳನ್ನು ಹಾಲ್ ಮಾರ್ಕ್ ಹಾಕಲು ನಗರತ್ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ಗೆ ನೀಡಲಾಗಿತ್ತು.

ಜನವರಿ 15ರಂದು ಚಿನ್ನಾಭರಣ ಕೊಡುವಂತೆ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್ನ ಮಾಲೀಕ ಭರತ್ ಚಟಡ್ ಅವರನ್ನ ಕೇಳಿದಾಗ, ತಮ್ಮ ಸಂಸ್ಥೆಯ ಉದ್ಯೋಗಿ ಕಳ್ಳತನ ಮಾಡಿದ್ದಾನೆ ಎಂದು ಉತ್ತರಿಸುತ್ತಿದ್ಾರ ಎಂದು ದೂರಲಾಗಿದೆ.

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ ಮ್ಯಾನೇಜರ್ ನೀಡಿರುವ ದೂರಿನನ್ವಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments