ಸರಕಾರ ಶಾಲೆಯ ಗೋಡೆ ಪೇಟಿಂಗ್ ಮಾಡಲು 4 ಲೀಟರ್ ಪೇಟಿಂಗ್ ಬಳಸಿ 65 ಮೇಸ್ತ್ರಿಗಳು ಹಾಗೂ 168 ಕಾರ್ಮಿಕರು ಸೇರಿ 233 ಮಂದಿ ಕೆಲಸ ಮಾಡಿದ ನಂಬಲಾಸಾಧ್ಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಾದೂಲ್ ಜಿಲ್ಲೆಯ ಸಕಂಡಿ ಮತ್ತು ನಿಪಾನಿಯಾ ಗ್ರಾಮಗಳ ಸರ್ಕಾರಿ ಶಾಲೆಗೆ ಬಣ್ಣ ಬಳಿಯಲು ಮಾಡಿರುವ ಬಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಕಂಡಿ ಗ್ರಾಮದ ಸರ್ಕಾರಿ ಶಾಲೆಗೆ ಕೇವಲ 4 ಲೀಟರ್ ಪೇಟಿಂಗ್ ಮತ್ತು ಆಯಿಲ್ ಬಳಸಲಾಗಿದ್ದು, ಇದಕ್ಕಾಗಿ ಬಿಲ್ 1.07 ಲಕ್ಷ ರೂ. ಹಾಗೂ ನಿಪಾನಿಯಾ ಗ್ರಾಮದ ಶಾಲೆಗೆ 20 ಲೀಟರ್ ಬಳಸಿ ಪೇಟಿಂಗ್ ಮಾಡಿದ್ದಕ್ಕಾಗಿ 2.03 ಲಕ್ಷ ರೂ. ಬಿಲ್ ಮಾಡಲಾಗಿದ್ದು, ಬಿಲ್ ಚಿತ್ರಗಳು ವೈರಲ್ ಆಗಿದೆ.
ಸಕಂಡಿ ಗ್ರಾಮದ ಶಾಲೆಯ ಒಂದು ಗೋಡೆಗೆ ಪೇಟಿಂಗ್ ಮಾಡಲು 168 ನೌಕರರು ಮತ್ತು 68 ಮೇಸ್ತ್ರಿಗಳನ್ನು ಬಳಸಲಾಗಿದ್ದು, ನಿಪಾನಿಯಾ ಗ್ರಾಮದ ಶಾಲೆಯ ನಾಲ್ಕು ಬಾಗಿಲು ಮತ್ತು 20 ಕಿಟಕಿಗಳಿಗೆ ಬಣ್ಣ ಬಳಿಯಲಾಗಿದೆ.
ಸುಧಾಕರ್ ಕನ್ ಸ್ಟಕ್ಷನ್ ಕಂಪನಿ ಈ ಬಿಲ್ ಹಾಕಿದೆ. ಒಂದು ಶಾಲೆಯ ಬಿಲ್ 2025 ಮೇ 5 ಮತ್ತು ಮತ್ತೊಂದು ಶಾಲೆಯ ಬಿಲ್ ಏಪ್ರಿಲ್ 4 ನಲ್ಲಿ ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿ ಈ ಬಿಲ್ ಗಳು ವೈರಲ್ ಆಗುತ್ತಿದ್ದಂತೆ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.



