Monday, August 24, 2026
Google search engine
Homeವಿದೇಶಪಾಕಿಸ್ತಾನದಲ್ಲಿ ಬೃಹತ್ ಕಾರ್ಯಾಚರಣೆ: ಮೇಜರ್ ಸೇರಿ 11 ಯೋಧರ ಸಾವು, 19 ಉಗ್ರರ ಹತ್ಯೆ!

ಪಾಕಿಸ್ತಾನದಲ್ಲಿ ಬೃಹತ್ ಕಾರ್ಯಾಚರಣೆ: ಮೇಜರ್ ಸೇರಿ 11 ಯೋಧರ ಸಾವು, 19 ಉಗ್ರರ ಹತ್ಯೆ!

ಉಗ್ರರ ವಿರುದ್ಧ ಪಾಕಿಸ್ತಾನ ಸೇನೆ ನಡೆಸಿದ ಬೃಹತ್ ಕಾರ್ಯಾಚರಣೆ ವೇಳೆ ಲೆಫ್ಟಿನೆಂಟ್ ಕರ್ನಲ್ ಸೇರಿ 11 ಯೋಧರು ಅಸುನೀಗಿದರೆ, 19 ಉಗ್ರರನ್ನು ಹತ್ಯೆಗೈಯ್ಯಲಾಗಿದೆ.

ಪಾಕಿಸ್ತಾನದ ತಾಲಿಬಾನ್ ಎಂದೇ ಕುಖ್ಯಾತಿ ಪಡೆದಿರುವ ತೆಹರಿಕ್ ಇ ತಾಲಿಬಾನ್ ಸಂಘಟನೆ ವಿರುದ್ಧ ಪಾಕಿಸ್ತಾನ ಸೇನೆ ಆಫ್ಘಾನಿಸ್ತಾನ ಗಡಿ ಭಾಗದಲ್ಲಿರುವ ಖೈಬರ್ ಪಕ್ತುಕುನ್ವಾ ಪ್ರದೇಶದಲ್ಲಿ ಕಾರ್ಯಚರಣೆ ನಡೆಸಿದೆ.

ಪಾಕಿಸ್ತಾನ ಸರ್ಕಾರ ಹಿಡಿತ ತಪ್ಪಿಸಲು ಇತರೆ ಉಗ್ರವಾದಿ ಸಂಘಟನೆಗಳು ಒಗ್ಗೂಡುತ್ತಿರುವ ಹಿನ್ನೆಲೆಯಲ್ಲಿ ಫಿತ್ನಾ ಕಿ ಖಾವಾರ್ಜಿ ಹೆಸರಿನಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಲಾಯಿತು.

ಕಳೆದ ತಿಂಗಳು ಇದೇ ರೀತಿ ಪಾಕಿಸ್ತಾನ ಸೇನೆ ಕಾರ್ಯಾಚರಣೆ ನಡೆಸಿ 17 ಉಗ್ರರನ್ನು ಹೊಡೆದುರುಳಿಸಿತ್ತು. ಗುಂಡಿನ ಚಕಮಕಿ ವೇಳೆ ಮೂವರು ಪೊಲೀಸರು ಹುತಾತ್ಮರಾಗಿದ್ದರು.

ಈ ದಾಳಿಯ ನಂತರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ನಡೆದ ಕಾರ್ಯಾಚರಣೆಯಲ್ಲಿ ಈಶಾನ್ಯ ಭಾಗದ ಡೆಲಾ ಇಸ್ಮಾಹಿಲ್ ಖಾನ್ ಜಿಲ್ಲೆಯಲ್ಲಿ ಅಡಗಿದ್ದ 13 ಪಾಕಿಸ್ತಾನಿ ತಾಲಿಬಾನ್ ಉಗ್ರರನ್ನು ಕೊಂದು ಹಾಕಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments