Sunday, May 31, 2026
Google search engine
Homeದೇಶಹೈದರಾಬಾದ್ ನ ಐತಿಹಾಸಿಕ ಚಾರ್ಮಿಮರ್ ಬಳಿ ಅಗ್ನಿ ದುರಂತ; ಮಕ್ಕಳು ಸೇರಿ 17 ಮಂದಿ ಸಾವು

ಹೈದರಾಬಾದ್ ನ ಐತಿಹಾಸಿಕ ಚಾರ್ಮಿಮರ್ ಬಳಿ ಅಗ್ನಿ ದುರಂತ; ಮಕ್ಕಳು ಸೇರಿ 17 ಮಂದಿ ಸಾವು

ಹೈದರಾಬಾದ್ ನ ಪ್ರಖ್ಯಾತ ಚಾರ್ಮಿನರ್ ಪ್ರವಾಸಿ ತಾಣದ ಸಮೀಪದ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 17 ಮಂದಿ ಸಾವಿಗೀಡಾದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿದ್ದು, ಶನಿವಾರ ಮುಂಜಾನೆ 6.30ರ ಸುಮಾರಿಗೆ ಅಗ್ನಿ ಶಾಮಕ ದಳ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದವು.

ಕೇಂದ್ರ ಸಚಿವ ಕಿಶನ್ ರೆಡ್ಡಿ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಇಂತಹ ದುರಂತಗಳು ಸಂಭವಿಸಿರುವುದು ನೋವು ಉಂಟು ಮಾಡಿದೆ. ಮೃತರ ಕುಟುಂಬಕ್ಕೆ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments