ಮೆಕ್ಸಿಕನ್ ನೌಕಾಪಡೆಯ ಹಡಗು ಅಮೆರಿಕದ ನ್ಯೂಯಾರ್ಕ್ ನ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ.
ಶನಿವಾರ ನಡೆದ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೆಕ್ಸಿಕನ್ ನೌಕಾಪಡೆಯ ಸೇಲಿಂಗ್ ಹಡಗು 297 ಅಡಿ ಉದ್ದ ಹಾಗೂ 40 ಅಡಿ ಅಗಲ ಹೊಂದಿದೆ.
ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.
ಮೆಕ್ಸಿಕನ್ ಶಿಪ್ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರಯಾಣಿಸುತ್ತದೆ. ಕಳೆದ ಏಪ್ರಿಲ್ 6ರಂದು ಹೊರಟ ಹಡಗಿನಲ್ಲಿ 277 ಮಂದಿ ಇದ್ದರು. ಕಿಂಗ್ಸಟನ್, ಜಮೈಕಾ, ಹವಾನಾ, ಕ್ಯೂಬಾ, ಕೊಜುಮೆಲ್, ಮೆಕ್ಸಿಕೊ ಮತ್ತು ನ್ಯೂಯಾರ್ಕ್ ಸೇರಿದಂತೆ 15 ದೇಶಗಳ ಬಂದರುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹೊಂದಿದೆ.



