Thursday, May 14, 2026
Google search engine
Homeಬೆಂಗಳೂರುಮೆಟ್ರೋದ ಹಸಿರು ಮಾರ್ಗಕ್ಕೆ 21 ಹೊಸ ರೈಲುಗಳು ಸೇರ್ಪಡೆ 

ಮೆಟ್ರೋದ ಹಸಿರು ಮಾರ್ಗಕ್ಕೆ 21 ಹೊಸ ರೈಲುಗಳು ಸೇರ್ಪಡೆ 

ಬೆಂಗಳೂರು:ನಮ್ಮ ಮೆಟ್ರೋದ ಹಸಿರು ಮಾರ್ಗದ ಮಾದಾವರ–ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಣ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಮಹತ್ವದ ನಿರ್ಧಾರವನ್ನು ಬಿಎಂಆರ್ ಸಿಎಲ್ ಕೈಗೊಂಡಿದೆ.

ಆರಂಭಿಕ ಹಂತದಲ್ಲಿ (ಫೇಸ್–1) ಕಾರ್ಯಾಚರಣೆಯಲ್ಲಿದ್ದ 17 ರೈಲುಗಳನ್ನು ಹಂತ ಹಂತವಾಗಿ ನೇರಳೆ ಮಾರ್ಗಕ್ಕೆ ಸ್ಥಳಾಂತರ ಮಾಡಲಾಗುತ್ತಿದ್ದು, ಹಸಿರು ಮಾರ್ಗಕ್ಕೆ ಸಂಪೂರ್ಣವಾಗಿ 21 ಹೊಸ ಆಧುನಿಕ 6-ಕೋಚ್ ಸಿಆರ್ ಆರ್ ಸಿ ರೈಲುಗಳನ್ನು ನಿಯೋಜಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ನೇರಳೆ ಮಾರ್ಗಕ್ಕೂ ಹೆಚ್ಚುವರಿ ರೈಲುಗಳು

33.5 ಕಿ.ಮೀ ಉದ್ದದ ಉತ್ತರ–ದಕ್ಷಿಣ ಕಾರಿಡಾರ್ ಆಗಿರುವ ಹಸಿರು ಮಾರ್ಗಕ್ಕೆ ಸಂಪೂರ್ಣ ಹೊಸ ರೈಲುಗಳನ್ನು ನೀಡುವ ಮೂಲಕ ಸಂಚಾರ ಅವಧಿಯನ್ನು ಕಡಿತಗೊಳಿಸಿ, ರೈಲುಗಳ ಓಡಾಟವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ಹೆಚ್ಚಿನ ಪ್ರಯಾಣಿಕರಿಂದ ಕೂಡಿರುವ ಪೂರ್ವ–ಪಶ್ಚಿಮ ಕಾರಿಡಾರ್‌ನ ನೇರಳೆ ಮಾರ್ಗಕ್ಕೂ ಹೆಚ್ಚುವರಿ ರೈಲುಗಳು ಲಭ್ಯವಾಗಲಿವೆ.

21 ರೈಲುಗಳ ಪೂರೈಕೆ:

2019–20ರ ಒಪ್ಪಂದದಂತೆ ಡಿಟಿಜಿ (ಡಿಸೈನ್ ಟು ಗೋ) ತಂತ್ರಜ್ಞಾನದ 21 ಮೆಟ್ರೋ ರೈಲುಗಳನ್ನು ಚೀನಾದ ಸಿಆರ್‌ಆರ್‌ಸಿ ಹಾಗೂ ಭಾರತದಲ್ಲಿನ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಪೂರೈಸಲಿದೆ. ಈ ಪೈಕಿ ಒಂದು ಪ್ರೋಟೋಟೈಪ್ ರೈಲು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಹಸಿರು ಮಾರ್ಗದಲ್ಲಿ ಜಲಹಳ್ಳಿ–ಮಂತ್ರಿಸ್ಕ್ವೇರ್–ಸಂಪಿಗೆ ರಸ್ತೆ ನಡುವಿನ ಭಾಗದಲ್ಲಿ ಆರ್‌ಡಿಎಸ್‌ಒ ಮೇಲ್ವಿಚಾರಣೆಯಲ್ಲಿ ರಾತ್ರಿ ವೇಳೆ ಪರೀಕ್ಷಾ ಸಂಚಾರ ನಡೆಯುತ್ತಿದೆ.

ವಾಣಿಜ್ಯ ಸೇವೆಗೆ ಸೇರ್ಪಡೆ:

ಮುಂದಿನ ಒಂದೆರಡು ವಾರಗಳಲ್ಲಿ ತಪಾಸಣೆ ಪೂರ್ಣಗೊಂಡ ಬಳಿಕ ರೈಲ್ವೆ ಸುರಕ್ಷತಾ ಪ್ರಧಾನ ಆಯುಕ್ತಾಲಯ ಹಾಗೂ ರೈಲ್ವೆ ಮಂಡಳಿಯ ಅನುಮೋದನೆ ಪಡೆದು ಮಾರ್ಚ್ ಒಳಗಾಗಿ ವಾಣಿಜ್ಯ ಸೇವೆಗೆ ಸೇರಿಸುವ ಗುರಿ ಹೊಂದಲಾಗಿದೆ. ಹೊಸ ರೈಲುಗಳ ಸೇರ್ಪಡೆಯಿಂದ ಸಂಚಾರ ವೇಗ ಹೆಚ್ಚಾಗಿ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments