Thursday, May 14, 2026
Google search engine
Homeತಾಜಾ ಸುದ್ದಿTirupati ಟೋಕನ್ ವಿತರಣೆ ವೇಳೆ ತಿರುಪತಿಯಲ್ಲಿ ಕಾಲ್ತುಳಿತಕ್ಕೆ 6 ಭಕ್ತರ ದುರ್ಮರಣ

Tirupati ಟೋಕನ್ ವಿತರಣೆ ವೇಳೆ ತಿರುಪತಿಯಲ್ಲಿ ಕಾಲ್ತುಳಿತಕ್ಕೆ 6 ಭಕ್ತರ ದುರ್ಮರಣ

ಟೋಕನ್ ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಭಕ್ತರು ಮೃತಪಟ್ಟ ದಾರುಣ ಘಟನೆ ತಿರುಪತಿಯಲ್ಲಿ ಸಂಭವಿಸಿದೆ.

ತಿರುಪತಿಯ ವಿಷ್ಣುನಿವಾಸಂ ದೇವಸ್ಥಾನದಲ್ಲಿ ವೈಕುಂಠದರ್ಶನ ಸರ್ವದರ್ಶನಮ್ ಗಾಗಿ ಭಕ್ತರಿಗೆ ಬುಧವಾರ ಟೋಕನ್ ವಿತರಿಸುವಾಗ ಈ ದುರಂತ ಸಂಭವಿಸಿದೆ.

ಟೋಕನ್ ಪಡೆಯಲು ಜನರು ಏಕಾಏಕಿ ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, ತಮಿಳುನಾಡಿನ ಸೇಲಂ ನಿವಾಸಿ ಸೇರಿದಂತೆ 6 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಕೂಡಲೇ ಆಂಬುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನಾ ಸ್ಥಳದಲ್ಲಿ ಪೊಲೀಸರು ಇದ್ದು, ಗಾಯಗೊಂಡವರನ್ನು ಆಂಬುಲೆನ್ಸ್ ನಲ್ಲಿ ಸಾಗಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments