Tuesday, June 30, 2026
Google search engine
Homeಕ್ರೀಡೆ4 ಬಾರಿಯ ಚಾಂಪಿಯನ್‌ ಜರ್ಮನಿಗೆ ಆಘಾತ: ಪರಾಗ್ವೆಗೆ ರೋಚಕ ಜಯ

4 ಬಾರಿಯ ಚಾಂಪಿಯನ್‌ ಜರ್ಮನಿಗೆ ಆಘಾತ: ಪರಾಗ್ವೆಗೆ ರೋಚಕ ಜಯ

ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ತಂಡವನ್ನು ಪೆನಾಲ್ಟಿ ಶೂಟೌಟ್‌ ನಲ್ಲಿ ಮಣಿಸಿ ಪರಾಗ್ವೆ ಫಿಫ್ ವಿಶ್ವಕಪ್‌ ಟೂರ್ನಿಯಿಂದ ಹೊರಹಾಕಿ ಅಚ್ಚರಿ ಮೂಡಿಸಿದೆ.

ಮಂಗಳವಾರ ಮುಂಜಾನೆ ನಡೆದ 32ರ ಹಂತದ ಪಂದ್ಯದಲ್ಲಿ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತ್ತು. ಪೆನಾಲ್ಟಿ ಶೂಟೌಟ್‌ ನಲ್ಲಿ ಪರಾಗ್ವೆ 4-3 ಗೋಲುಗಳಿಂದ ಸೋಲಿಸಿತು. ಈ ಮೂಲಕ ಉರುಗ್ವೆ ೧೬ನೇ ಹಂತ ಪ್ರವೇಶಿಸಿದರೆ ಜರ್ಮನಿ ಸೋಲಿನ ಆಘಾತದಿಂದ ಹೊರಬಿದ್ದಿತು.

ಪಂದ್ಯದ ಮೊದಲಾರ್ಧದಲ್ಲಿ ಪರಾಗ್ವೆ ಜರ್ಮನಿಗೆ ಆಘಾತ ನೀಡಿ 42ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ಮಟಿಯಾಸ್ ಗಲಾರ್ಜಾ ನೀಡಿದ ಅದ್ಭುತ ಕ್ರಾಸ್ ಅನ್ನು ಜೂಲಿಯೊ ಎನ್ಸಿಸೊ ಗೋಲು ಪೆಟ್ಟಿಗೆಗೆ ಹಾಕಿದರು. ಆದರೆ ಜರ್ಮನಿ ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡು ಬಲವಾಗಿ ಕಮ್​ಬ್ಯಾಕ್​ ಮಾಡಿ 54ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು.

ಎಡಭಾಗದಿಂದ ಫ್ಲೋರಿಯನ್ ವಿರ್ತ್ ನೀಡಿದ ಅದ್ಭುತ ಹೆಡರ್ ಮೂಲಕ ಕೈ ಹ್ಯಾವರ್ಟ್ಜ್ ಚೆಂಡನ್ನು ನೆಟ್‌ಗೆ ಹೆಡ್ ಮಾಡಿದರು. ನಂತರ ಎರಡೂ ತಂಡಗಳು ಗೆಲುವಿನ ಗೋಲು ಗಳಿಸಲು ಶ್ರಮಿಸಿದವು, ಆದರೆ ಸಾಧ್ಯವಾಗಲಿಲ್ಲ. ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆಯೂ ಶೂಟೌಟ್​ನಲ್ಲಿ ಸೋಲದ ಜರ್ಮನಿ ಈ ಬಾರಿ ದೊಡ್ಡ ಹಿನ್ನಡೆ ಅನುಭವಿಸಿತು. ಮೊದಲ ಕಿಕ್ ತೆಗೆದುಕೊಂಡ ಜರ್ಮನಿಯ ಕೈ ಹ್ಯಾವರ್ಟ್ಜ್ ಮತ್ತು ನಾಲ್ಕನೇ ಕಿಕ್ ತೆಗೆದುಕೊಂಡ ನಿಕ್ ವೋಲ್ಟ್‌ಮೀಡ್ ಅವರನ್ನು ಪರಾಗ್ವೆಯ ಕೀಪರ್ ಒರ್ಲ್ಯಾಂಡೊ ಗೋಲು ಗಳಿಸಿದಂತೆ ತಡೆದರು.

ನಂತರ ಕೊನೆಯ ಎರಡು ಕಿಕ್‌ಗಳನ್ನು ತಪ್ಪಿಸಿಕೊಂಡ ಪರಾಗ್ವೆ ಕೂಡ ಒತ್ತಡಕ್ಕೆ ಸಿಲುಕಿತು. ಇದರಿಂದಾಗಿ ಪಂದ್ಯವು ಸಡನ್ ಡೆತ್‌ಗೆ ಹೋಯಿತು. ಸಡನ್ ಡೆತ್‌ನಲ್ಲಿ ಮೊದಲ ಕಿಕ್ ತೆಗೆದುಕೊಂಡ ಜರ್ಮನ್ ಆಟಗಾರ ಜೊನಾಥನ್ ತಾಹಿನ್ ಹೊಡೆದ ಚಂಡು ಶಾಟ್ ಕ್ರಾಸ್‌ಬಾರ್ ಮೇಲೆ ಹೋಯ್ತು, ಬಳಿಕ ಜೋಸ್ ಕೆನಾಲೆ ಗೋಲು ಗಳಿಸಿ ಪರಾಗ್ವೆಗೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತಿರುವುದು. ಜರ್ಮನಿ ಹಿಂದಿನ ನಾಲ್ಕು ಶೂಟೌಟ್‌ಗಳಲ್ಲಿಯೂ ಗೆಲುವು ಸಾಧಿಸಿತ್ತು. ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಜರ್ಮನಿ ಶೂಟೌಟ್‌ನಲ್ಲಿ ಸೋತಿರುವುದು ಇದು ಎರಡನೇ ಬಾರಿಯಾಗಿದೆ. 1976ರ ಯುರೋಪಿಯನ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಜೆಕೊಸ್ಲೊವಾಕಿಯಾ ವಿರುದ್ಧ ಹಿಂದಿನ ಸೋಲಾಗಿತ್ತು.

ಆ ದಿನ ಜರ್ಮನಿ 5-3 ಅಂತರದಿಂದ ಸೋಲನ್ನು ಕಂಡಿತ್ತು. ಜರ್ಮನಿಯಂತಹ ದೊಡ್ಡ ತಂಡವನ್ನು ಟೂರ್ನಿಯಿಂದ ಹೊರದಬ್ಬಿದ ನಂತರ ಪರಾಗ್ವೆ ಹೆಚ್ಚಿನ ಆತ್ಮವಿಶ್ವಾಸ ಪಡೆದುಕೊಂಡಿದೆ. ಈ ಅವಿಸ್ಮರಣೀಯ ಗೆಲುವಿನೊಂದಿಗೆ, ಪರಾಗ್ವೆ ಅಧಿಕೃತವಾಗಿ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

32ನೇ ಸುತ್ತಿನ ಇತರ ಪಂದ್ಯಗಳ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ, ಮುಂದಿನ ನಾಕೌಟ್ ಪಂದ್ಯದಲ್ಲಿ ಪರಾಗ್ವೆ ಯಾರನ್ನು ಎದುರಿಸಲಿದೆ ಎಂಬುದು ಸ್ಪಷ್ಟವಾಗುತ್ತದೆ. ವಿಶ್ವಕಪ್ ಗೆಲ್ಲುವ ಸಾಧ್ಯತೆ ಇದೆ ಎಂದು ಪರಿಗಣಿಸಲಾದ ತಂಡಗಳಲ್ಲಿ ಒಂದಾದ ಜರ್ಮನಿಯ ಅನಿರೀಕ್ಷಿತ ಸೋಲು ಫುಟ್ಬಾಲ್​ ಅಭಿಮಾನಿಗಳನ್ನು ಭಾರಿ ನಿರಾಸೆಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments