Tuesday, June 30, 2026
Google search engine
Homeಅಪರಾಧಮದುವೆ ಆಗಲು 16 ದಿನದ ಮಗುವನ್ನು ಕಾಲಿನಿಂದ ತುಳಿದು ಕೊಂದ 4 ಮಹಿಳೆಯರು!

ಮದುವೆ ಆಗಲು 16 ದಿನದ ಮಗುವನ್ನು ಕಾಲಿನಿಂದ ತುಳಿದು ಕೊಂದ 4 ಮಹಿಳೆಯರು!

ಮದುವೆ ಆಗಲು ಹಾತೊರೆಯುತ್ತಿದ್ದ ನಾಲ್ವರು ಮಹಿಳೆಯರು ಮೂಢನಂಬಿಕೆಯಿಂದ 16 ದಿನದ ಮಗುವನ್ನು ಕಾಲಿನಿಂದ ತುಳಿದು ಕೊಂದ ಭೀಕರ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ.

ಸಂಪ್ರದಾಯದ ಪ್ರಕಾರ ಮಗುವನ್ನು ಕೊಂದರೆ ಮದುವೆ ಆಗುತ್ತದೆ ಎಂದು ನಂಬಿದ ಮಹಿಳೆಯರು ಸಂಬಂಧದಲ್ಲಿ ಸೋದರಳಿಯ ಆಗಬೇಕಿದ್ದ ಹಸುಗೂಸನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.

ಮಹಿಳೆಯರು ಕೊಲೆ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವೀಡಿಯೊದಲ್ಲಿ ಒಬ್ಬ ಮಹಿಳೆ ತನ್ನ ಮಡಿಲಲ್ಲಿ ಶಿಶುವನ್ನು ಇಟ್ಟುಕೊಂಡು ಏನೋ ಜಪಿಸುತ್ತಿದ್ದರೆ ಆಕೆಯ ಸುತ್ತಲೂ ಕುಳಿತಿದ್ದ ಇತರ ಕೆಲವು ಮಹಿಳೆಯರು ಈ ಜಪದಲ್ಲಿ ಸೇರಿಕೊಂಡರು. ನಂತರ ಉನ್ಮಾದದಲ್ಲಿ ಈ ಕೃತ್ಯ ಎಸಗಿದ್ದಾರೆ.

ಜಾನಪದ ದೇವತೆಯಾದ ಭೇರು ಅವರನ್ನು ಪ್ರಾರ್ಥಿಸಿ, ಮದುವೆಗೆ ಇದ್ದ ಕಂಟಕ ಬಗೆಹರಿಯುತ್ತದೆ ಎಂಬ ನಂಬಿಕೆಯಿಂದ ಈ ಕೃತ್ಯ ಎಸಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ತಿಗೆಯಂದಿರೇ ಸೇರಿ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಮಗುವಿನ ತಂದೆ ಆರೋಪಿಸಿದ್ದಾರೆ. ಅತ್ತಿಗೆಯಂದಿರಿಗೆ ಮದುವೆ ಆಗಿರಲಿಲ್ಲ. ಹೇಗಾದರೂ ಸರಿ ಮದುವೆ ಆಗಲೇಬೇಕು ಎಂದು ಹಠಕ್ಕೆ ಬಿದ್ದಿದ್ದ ಅವರು ಈ ರೀತಿಯ ಮೂಢನಂಬಿಕೆಯಿಂದ ಮಗುವನ್ನು ತುಳಿದು ಕೊಂದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

“ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಅಂತಹ ವೀಡಿಯೊಗಳನ್ನು ಮಾಡಲಾಗುತ್ತಿದೆ” ಎಂದು ಮಗುವಿನ ತಂದೆ ಆಗ್ರಹಿಸಿದ್ದಾರೆ. ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments