Saturday, May 16, 2026
Google search engine
Homeದೇಶಲಾಲೂ ಕುಟುಂಬದಲ್ಲಿ ಬಿರುಕು: ಸೋದರಿ ರೋಹಿಣಿ ಮೇಲೆ ಚಪ್ಪಲಿ ಎಸೆದ ತೇಜಸ್ವಿ ಯಾದವ್‌!

ಲಾಲೂ ಕುಟುಂಬದಲ್ಲಿ ಬಿರುಕು: ಸೋದರಿ ರೋಹಿಣಿ ಮೇಲೆ ಚಪ್ಪಲಿ ಎಸೆದ ತೇಜಸ್ವಿ ಯಾದವ್‌!

ಬಿಹಾರ ವಿಧಾನಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಆರ್‌ ಜೆಡಿ ಪಕ್ಷದ ಲಾಲೂ ಪ್ರಸಾದ್‌ ಯಾದವ್‌ ಕುಟುಂಬದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸೋದರಿ ಸೋದರಿ ಯಾದವ್‌ ಮೇಲೆ ತೇಜಸ್ವಿ ಯಾದವ್‌ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ ಜೆಡಿ ಪಕ್ಷದ ಮುಖಂಡ ಹಾಗೂ ಪ್ರತಿಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್‌ ಶನಿವಾರ ನಡೆದ ಮಾತುಕತೆ ವೇಳೆ ಸೋಲಿಗೆ ರೋಹಿಣಿ ಆಚಾರ್ಯ ಕಾರಣ ಎಂದು ಆರೋಪಿಸಿ ನಿಂದಿಸಿದ್ದೂ ಅಲ್ಲದೇ ಕೋಪದ ಭರದಲ್ಲಿ ಆಕೆಯ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನಿಂದಾಗಿ ನಾವು ಚುನಾವಣೆಯಲ್ಲಿ ಸೋತೆವು. ನಿನ್ನಿಂದಾಗಿ ನಾವು ಮಣ್ಣುಮುಕ್ಕಿದೆವು ಎಂದು ತೇಜಸ್ವಿ ಸೋದರಿ ರೋಹಿಣಿ ಆಚಾರ್ಯ ಮೇಲೆ ನೇರ ಆರೋಪ ಮಾಡಿದ್ದಾರೆ.

ರೋಹಿಣಿ ಆಚಾರ್ಯ ತಂದೆ ಲಾಲೂ ಪ್ರಸಾದ್‌ ಯಾದವ್‌ ಗೆ ಕಿಡ್ನಿ ದಾನ ಮಾಡಿದ್ದು, ಇದು ಕೊಳಕು ಕಿಡ್ನಿ ಎಂದು ತೇಜಸ್ವಿ ಕಿಡಿಕಾರಿದ್ದಾರೆ. ಕಳೆದ ಬಾರಿ ಸರನ್‌ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ರೋಹಿಣಿ ಸೋಲಿಗೆ ನೈತಿಕ ಹೊಣೆ ಹೊತ್ತಿದ್ದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆರ್‌ ಜೆಡಿ 243ಸ್ಥಾನಗಳಲ್ಲಿ ಕೇವಲ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments