45 ರಷ್ಯಾ ಪ್ರವಾಸಿಗರಿದ್ದ ಸಬ್ ಮೇರಿನ್ ಈಜಿಪ್ಟ್ ನ ಕೆಂಪು ಸಮುದ್ರದಲ್ಲಿ ಮುಳುಗಿದ್ದರಿಂದ ಕನಿಷ್ಠ 6 ಮಂದಿ ಮೃತಪಟ್ಟರೆ 9ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹುರುಗಾಡ ಎಂಬಲ್ಲಿ ಕೆಂಪು ಸಮುದ್ರದಲ್ಲಿ ಗುರುವಾರ ಈ ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ ಹಾಗೂ ವಿವರಗಳು ಇನ್ನಷ್ಟೇ ಬರಬೇಕಿದೆ.
ದುರ್ಘಟನೆ ವೇಳೆ 29 ಮಂದಿಯನ್ನು ರಕ್ಷಿಸಲಾಗಿದ್ದು, ಹುರುಗಾಡ ಸಮುದ್ರ ತೀರದಲ್ಲಿ ಈ ಘಟನೆ ಆಗಿದ್ದರಿಂದ ಕೂಡಲೇ ರಕ್ಷಣ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.
ಹಡಗಿನಲ್ಲಿ ಸಿಬ್ಬಂದಿ ಅಲ್ಲದೇ 45 ಪ್ರವಾಸಿಗರು ಇದ್ದು ಎಲ್ಲರೂ ರಷ್ಯಾ ಪ್ರಜೆಗಳಾಗಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.



