ಬಲೂಚಿಸ್ತಾನ ಪ್ರತ್ಯೇಕತಾವಾದಿ ಸೇನೆ ಸ್ಫೋಟಕ ಬಳಸಿ ಸೇನಾ ವಾಹನ ಸ್ಫೋಟಿಸಿದ್ದರಿಂದ 7 ಪಾಕಿಸ್ತಾನಿ ಯೋಧರು ಮೃತಪಟ್ಟಿದ್ದಾರೆ.
ಬಲೂಚಿಸ್ತಾನ ಈಶಾನ್ಯ ಭಾಗದಲ್ಲಿ ಮಂಗಳವಾರ ಪಾಕಿಸ್ತಾನ ಸೇನಾ ವಾಹನ ಗುರಿಯಾಗಿ ಎಲ್ ಇಡಿ ಸ್ಫೋಟಕ ಬಳಸಿ ದಾಳಿ ಮಾಡಿದೆ. ಪಾಕಿಸ್ತಾನದಿಂದ ಪ್ರತ್ಯೇಕ ರಾಷ್ಟ್ರ ಘೋಷಣೆಗೆ ಒತ್ತಾಯಿಸಿ ಈ ದಾಳಿ ನಡೆಸಿದ್ದಾಗಿ ಬಲೂಚಿಸ್ತಾನ ಪ್ರತ್ಯೇಕತಾವಾದಿ ಸೇನೆ ಹೇಳಿಕೊಂಡಿದೆ.
ಕಾಚಿ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಬಲೂಚಿಸ್ತಾನಿ ಸೇನೆ ದಾಳಿ ನಡೆಸಿದ್ದು, 7 ಯೋಧರು ಹುತಾತ್ಮರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ಕೂಡ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆ ಬಲೂಚಿಸ್ತಾನ ಪಾಕಿಸ್ತಾನ ವಿರುದ್ಧ ಹೋರಾಟ ಆರಂಭಿಸಿದೆ. ಇದೇ ವೇಳೆ ಪಾಕಿಸ್ತಾನ ಸೇನೆಯಲ್ಲಿದ್ದ 100ಕ್ಕೂ ಬಲೂಚಿಸ್ತಾನಿಗಳು ರಾಜೀನಾಮೆ ನೀಡಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ.



