Saturday, May 16, 2026
Google search engine
Homeದೇಶಭಾರತದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪಾಕ್‌- ಬಾಂಗ್ಲಾದ 8 ಉಗ್ರರು ಅರೆಸ್ಟ್‌

ಭಾರತದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪಾಕ್‌- ಬಾಂಗ್ಲಾದ 8 ಉಗ್ರರು ಅರೆಸ್ಟ್‌

ಭಾರತದ ವಿವಿದೆಡೆ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ 8 ಮಂದಿಯನ್ನು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಬಂಧಿತರು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲದ ಉಗ್ರರ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.

ಪಾಕಿಸ್ತಾನದ ಐಎಸ್‌ ಐ ಹಾಗೂ ಬಾಂಗ್ಲಾದೇಶ ಮೂಲದ ಉಗ್ರರ ಸಂಪರ್ಕ ಹೊಂದಿದವರನ್ನು ಬಂಧಿಸಲಾಗಿದೆ. ತಮಿಳುನಾಡಿನಲ್ಲಿ 6 ಮಂದಿ ಬಾಂಗ್ಲಾದೇಶೀಯರನ್ನು ಬಂಧಿಸಲಾಗಿದ್ದರೆ, ಪಶ್ಚಿಮ ಬಂಗಳಾದಲ್ಲಿ ಪಾಕಿಸ್ತಾನದ ಐಎಸ್‌ ಐ ಸಂಪರ್ಕ ಹೊಂದಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ತಮಿಳುನಾಡಿನ ತಿರುಪ್ಪರ್‌ ನಲ್ಲಿ ಬಾಂಗ್ಲಾದೇಶದ ಮಿರ್ಜಾಪುರ್‌ ರೆಹಮಾನ್‌, ಮೊಹಮದ್‌ ಶಹಬಾತ್‌, ಉಮರ್‌ ಮೊಹಮದ್‌ ಲಿಟಾನ್‌, ಮೊಹಮದ್‌ ಶಹೀದ್‌ ಮೊಹಮದ್‌ ಉಜ್ಜಿಲ್‌ ಬಂಧಿಸಲಾಗಿದ್ದರೆ, ಇವರು ಖಾಸಗಿ ಕಂಪನಿಯ ಉದ್ಯೋಗಿಗಳು ಆಗಿದ್ದರು.

ಬಂಧಿತರು ನಕಲಿ ಆಧಾರ್‌ ಕಾರ್ಡ್‌ ಬಳಸಿ ಸ್ಥಳೀಯ ನಿವಾಸಿಗಳಾಗಿದ್ದರು. ಬಂಧಿತರಿಂದ 16 ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದೆ.

ಬಂಧಿತರು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೆಂಪುಕೋಟೆ, ದೇವಸ್ಥಾನ ಸೇರಿದಂತೆ ದೆಹಲಿಯ ನಾನಾ ಕಡೆ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ಹೇಳಲಾಗಿದ್ದು, ಲಷ್ಕರೆಈ-ತೋಯ್ಬಾ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments