Saturday, May 16, 2026
Google search engine
Homeಕ್ರೀಡೆ2ನೇ ಬಾರಿ ದಾಂಪತ್ಯಕ್ಕೆ ಕಾಲಿಟ್ಟ ಶಿಖರ್‌ ಧವನ್!‌

2ನೇ ಬಾರಿ ದಾಂಪತ್ಯಕ್ಕೆ ಕಾಲಿಟ್ಟ ಶಿಖರ್‌ ಧವನ್!‌

ಭಾರತ ತಂಡದ ಸ್ಫೋಟಕ ಆರಂಭಿಕ ಶಿಖರ್‌ ಧವನ್‌ ದೀರ್ಘಕಾಲದ ಗೆಳತಿ ಸೋಫಿ ಶೈನ್‌ ಅವರನ್ನು ದೆಹಲಿಯಲ್ಲಿ ನಡೆದ ಸರಳ ಸಮಾರಂಭವದಲ್ಲಿ ವಿವಾಹವಾದರು. ಈ ಮೂಲಕ ಶಿಖರ್‌ ಧವನ್‌ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಐರ್ಲೆಂಡ್‌ ಮೂಲದ ಸೋಫಿ ಶೈನ್‌ ಉನ್ನತ ಶಿಕ್ಷಣ ಪಡೆದಿದ್ದು, ನಾರ್ಥನ್‌ ಟ್ರಸ್ಟ್‌ ಕಾರ್ಪೊರೇಷನ್‌ ನಲ್ಲಿ ಎರಡನೇ ಉಪಾಧ್ಯಕ್ಷೆ ಆಗಿದ್ದಾರೆ. ಮಾರ್ಕೆಟಿಂಗ್‌ ಅಂಡ್‌ ಮ್ಯಾನೇಜ್‌ ಮೆಂಟ್‌ ಪದವಿ ಪಡೆದಿದ್ದಾರೆ.

ಸೋಫಿ ಸಾಮಾಜಿಕ ಜಾಲತಾಣದಲ್ಲೂ ಖ್ಯಾತಿ ಪಡೆದಿದ್ದು, ಇನ್‌ ಸ್ಟಾಗ್ರಾಂನಲ್ಲಿ 3.70 ಲಕ್ಷ ಫಾಲೋವರ್ಸ್‌ ಹೊಂದಿದ್ದು, ಕೆಲವು ವರ್ಷಗಳಿಂದ ಶಿಖರ್‌ ಧವನ್‌ ಜೊತೆಗಿರುವ ಫೋಟೊಗಳನ್ನು ಪೋಸ್ಟ್‌ ಮಾಡುತ್ತಾ ಬಂದಿದ್ದಾರೆ.

ಶಿಖರ್‌ ಧವನ್‌ ಮತ್ತು ಸೋಫಿ 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳೆ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕಳೆದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶನಿವಾರ ಸದ್ದಿಲ್ಲದೇ ದೆಹಲಿಯಲ್ಲಿ ಧವನ್‌ ವಿವಾಹ ಸಮಾರಂಭ ಜರುಗಿದ್ದು, ಯಜುರ್ವೆಂದ್ರ ಚಾಹಲ್‌ ಮದುವೆ ಸಮಾರಂಭದ ಫೋಟೊ ಹಂಚಿಕೊಂಡಿದ್ದಾರೆ.

ಶಿಖರ್‌ ಧವನ್‌ ೨೦೨೩ರಲ್ಲಿ ಮೊದಲ ಪತ್ನಿ ಆಯೇಷಾ ಮುಖರ್ಜಿ ಜೊತೆ ವಿಚ್ಚೇದನ ಪಡೆದಿದ್ದರು. ಇಬ್ಬರಿಗೆ 11 ವರ್ಷದ ಜೊರಾವರ್‌ ಧವನ್‌ ಎಂಬ ಒಬ್ಬ ಮಗ ಇದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments