Monday, November 25, 2024
Google search engine
Homeತಾಜಾ ಸುದ್ದಿಅಸ್ಸಾಂ ಸಿಎಂ ಹಿಮಂತ್ ಶರ್ಮ ವಿರುದ್ಧ 18 ಪ್ರತಿಪಕ್ಷಗಳಿಂದ ದೂರು!

ಅಸ್ಸಾಂ ಸಿಎಂ ಹಿಮಂತ್ ಶರ್ಮ ವಿರುದ್ಧ 18 ಪ್ರತಿಪಕ್ಷಗಳಿಂದ ದೂರು!

ಮಿಯಾ ಎಂಬ ಪದ ಬಳಸಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ವಿರುದ್ಧ 18 ಪ್ರತಿಪಕ್ಷಗಳು ಪೊಲೀಸ್ ಠಾಣೆಗೆ ದೂರು ನೀಡಿವೆ.

`ಮಿಯಾ’ ಮುಸ್ಲಿಮ್ ನಾಯಕರು ಮೇಲುಗೈ ಸಾಧಿಸಲು ನಾನು ಬಿಡುವುದಿಲ್ಲ ಎಂದು ಹಿಮಂತ್ ಬಿಸ್ವಾ ಶರ್ಮ ಹೇಳಿಕೆ ನೀಡಿದ್ದರು.

ಹಿಮಂತ್ ಬಿಸ್ವಾ ಶರ್ಮ ಲೋಕಸಭಾ ಚುನಾವಣೆ ನಂತರ ಅಸ್ಸಾಂನಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು 18 ಪ್ರತಿಪಕ್ಷಗಳು ಆರೋಪಿಸಿವೆ.

18 ಪಕ್ಷಗಳು ಜಂಟಿಯಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮ ಸೂಕ್ಷ್ಮವಾದ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸಿ ಕೋಮು ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments