ಪತ್ನಿಯನ್ನು ಚೇರ್ ಗೆ ಕಟ್ಟಿ ಹಾಕಿ ಕುತ್ತಿಗೆ ಕೊಯ್ದು ಪತಿ ಬರ್ಬರವಾಗಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಪತ್ನಿ ನವ್ಯಾಳನ್ನು (24) ಪತಿ ಕಿರಣ್ ಕೊಲೆ ಮಾಡಿದ್ದಾರೆ.
ಕಿರಣ್ ಚಿಕ್ಕಬಳ್ಳಾಪುರ ಮೂಲದ ನಿವಾಸಿಯಾಗಿದ್ದು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದ ನವ್ಯಾ ಕೊರಿಯೊಗ್ರಾಫರ್ ಆಗಿದ್ದರು.
ಮೂರು ವರ್ಷಗಳ ಹಿಂದೆಯಷ್ಟೇ ಮದುವೆ ಆಗಿದ್ದ ಕಿರಣ್ ಮತ್ತು ನವ್ಯಾಗೆ ಮಕ್ಕಳು ಇರಲಿಲ್ಲ. ಕೆಂಗೇರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.