ಪಾಕಿಸ್ತಾನ ಏಕದಿನ ಮತ್ತು ಟಿ-20 ಕ್ರಿಕೆಟ್ ತಂಡದ ನಾಯಕರಾಗಿ ಬಾಬರ್ ಅಜಮ್ ಅವರನ್ನು ಪುನರಾಯ್ಕೆ ಮಾಡಲಾಗಿದೆ.
2023ರ ಏಕದಿನ ವಿಶ್ವಕಪ್ ಆಘಾತದ ಹಿನ್ನೆಲೆಯಲ್ಲಿ ನಾಯಕ ಸ್ಥಾನ ಕಳೆದುಕೊಂಡಿದ್ದ ಬಾಬರ್ ಅಜಮ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಾಯಕನಾಗಿ ಮರು ನೇಮಕ ಮಾಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಪ್ರಕಟಿಸಿದ್ದು, ಬಿಳಿ ಚೆಂಡಿನ ಪಂದ್ಯಗಳಿಗೆ ನಾಯಕನಾಗಿ ಬಾಬರ್ ಅಜಮ್ ಅವರನ್ನು ಮರು ನೇಮಕ ಮಾಡಲಾಗಿದೆ. ಈ ಸ್ಥಾನಕ್ಕೆ ಹಲವು ಹೆಸರುಗಳು ಪ್ರಸ್ತಾಪ ಆಗಿದ್ದರೂ ಅಂತಿಮವಾಗಿ ಬಾಬರ್ ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.