Thursday, September 19, 2024
Google search engine
Homeತಾಜಾ ಸುದ್ದಿಸಿಎಂ ಸಿದ್ದರಾಮಯ್ಯ ಸೊಸೆ ಬರ್ತಡೆ ಪಾರ್ಟಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ: ಫೋಟೊಗಳು ವೈರಲ್!

ಸಿಎಂ ಸಿದ್ದರಾಮಯ್ಯ ಸೊಸೆ ಬರ್ತಡೆ ಪಾರ್ಟಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ: ಫೋಟೊಗಳು ವೈರಲ್!

ಜೈಲಲ್ಲಿರುವ ಪತಿ ದರ್ಶನ್ ಬಿಡುಗಡೆಗೆ ಪರದಾಟ ನಡೆಸುತ್ತಿರುವ ಪತ್ನಿ ವಿಜಯಲಕ್ಷ್ಮೀ ಒತ್ತಡಗಳ ನಡುವೆಯೂ ಸ್ನೇಹಿತೆಯ ಬರ್ತಡೆ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಪಾರ್ಟಿಯ ಫೋಟೊಗಳು ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 2 ತಿಂಗಳಿನಿಂದ ಜೈಲಿನಲ್ಲಿರುವ ದರ್ಶನ್ ಪ್ರಸ್ತುತ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಕೆಲವು ದಿನಗಳ ಹಿಂದೆಯಷ್ಟೇ 3991 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರಿಂದ ಇದೀಗ ಜಾಮೀನಿಗೆ ದರ್ಶನ್ ಪ್ರಯತ್ನ ಆರಂಭಿಸಲಿದ್ದಾರೆ.

ಬೆಂಗಳೂರು-ಬಳ್ಳಾರಿ ಎಂದು ಓಡಾಟದಲ್ಲಿ ದಣಿಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಸೆ ಅವರ ಬರ್ತಡೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ಸಿದ್ದರಾಮಯ್ಯ ಅವರ ದಿವಂಗತ ಪುತ್ರ ರಾಕೇಶ್ ಅವರ ಪತ್ನಿ ಸ್ಮಿತಾ ರಾಕೇಶ್ ಬರ್ತಡೇ ಆಚರಿಸಿಕೊಂಡಿದ್ದರು. ಪಾರ್ಟಿಯಲ್ಲಿ ಸ್ಮಿತಾ ಅವರ ಜೊತೆಗಿರುವ ಫೋಟೋಗಳನ್ನು ಸ್ನೇಹಿತೆ ಶ್ರುತಿ ರಮೇಶ್‌ ಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋಗಳಲ್ಲಿ ವಿಜಯಲಕ್ಷ್ಮಿ ಕೂಡ ಇದ್ದಾರೆ. ಹೀಗಾಗಿ ಇವರಿಬ್ಬರು ಹೇಗೆ ಸ್ನೇಹಿತರು ಎಂದು ನೆಟ್ಟಿಗರು ಚರ್ಚೆ ನಡೆಸಿದ್ದರೆ ಮತ್ತೊಂದೆಡೆ ಇಂತಹ ಒತ್ತಡದ ಸಂದರ್ಭದಲ್ಲಿ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಅದು ಅವರ ವೈಯಕ್ತಿಕ ವಿಷಯವಾಗಿದ್ದು, ಚರ್ಚೆ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಸಿದ್ದರಾಮಯ್ಯ ಸೊಸೆ ಸ್ಮಿತಾ ಮತ್ತು ವಿಜಯಲಕ್ಷ್ಮಿ ಸ್ನೇಹಿತೆಯರು ಎನ್ನಲಾಗಿದೆ. ಸ್ಮಿತಾ ರಾಕೇಶ್ ಅವರ ಹೆಸರಿನಲ್ಲಿ ಲೀ ಮೆರಿಡಿಯನ್ ಎಂಬ 5 ಸ್ಟಾರ್ ಹೋಟೆಲ್ ಇದ್ದು ಅದನ್ನು ಈಗ ಮುಚ್ಚಲಾಗಿದೆ. ಸದ್ಯ ಬೆಂಗಳೂರಿನ ಕೋರಮಂಗಲದಲ್ಲಿರುವ ರಾಕೇಶ್ ಹೆಸರಿನಲ್ಲಿರುವ ಶುಗರ್ ಫ್ಯಾಕ್ಟರಿ ಎಂಬ ಪಬ್‌ ಪಾಲುದಾರಿಕೆಯಲ್ಲಿ ಸ್ಮಿತಾ ನೋಡಿಕೊಳ್ಳುತ್ತಿದ್ದಾರೆ. ಸ್ಮಿತಾ ಅವರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments