Friday, September 20, 2024
Google search engine
Homeತಾಜಾ ಸುದ್ದಿಬರ್ತಡೆ ದಿನ ಲಾಂಗ್ ಡ್ರೈವ್: ಒಂದೇ ಬೈಕ್ ನಲ್ಲಿದ್ದ ಮೂವರು ಬಿಎಸ್ಸಿ ವಿದ್ಯಾರ್ಥಿಗಳ ದುರ್ಮರಣ

ಬರ್ತಡೆ ದಿನ ಲಾಂಗ್ ಡ್ರೈವ್: ಒಂದೇ ಬೈಕ್ ನಲ್ಲಿದ್ದ ಮೂವರು ಬಿಎಸ್ಸಿ ವಿದ್ಯಾರ್ಥಿಗಳ ದುರ್ಮರಣ

ಸ್ನೇಹಿತನ ಜನ್ಮದಿನದ ಸಂಭ್ರಮದಲ್ಲಿ ಲಾಂಗ್ ಡ್ರೈವ್ ಹೊರಟ್ಟಿದ್ದ ಮೂವರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

ಚಿಕ್ಕಜಾಲ ಸಂಚಾರ ವ್ಯಾಪ್ತಿಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬುಧವಾರ ತಡರಾತ್ರಿ ಗೂಡ್ಸ್ ರೈಲಿಗೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಜಿಕೆವಿಕೆಯಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಜಿತ್, ರೋಹಿತ್ ಹಾಗೂ ಹರ್ಷ ಮೃತಪಟ್ಟಿದ್ದಾರೆ.

ಸುಜಿತ್ ಜನ್ಮದಿನದ ಪ್ರಯುಕ್ತ ಐವರು ವಿದ್ಯಾರ್ಥಿಗಳು ಎರಡು ಬೈಕ್​ನಲ್ಲಿ ವಿಮಾನ ನಿಲ್ದಾಣದ​ ಕಡೆ ಲಾಂಗ್ ಡ್ರೈವ್​ ತೆರಳಿದ್ದರು. ಸುಜಿತ್, ರೋಹಿತ್ ಹಾಗೂ ಹರ್ಷ ಒಂದೇ ಬೈಕಿನಲ್ಲಿದ್ದರೆ, ಮತ್ತೊಂದು ಬೈಕಿನಲ್ಲಿ ಇನ್ನಿಬ್ಬರು ತೆರಳಿದ್ದರು. ಜನ್ಮದಿನ ಆಚರಿಸಿಕೊಂಡು ವಾಪಸ್ ಬರುವಾಗ ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಜಾಲ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಶೀಲನೆ ನಡೆಸಿದ್ದು, ವಿದ್ಯಾರ್ಥಿಗಳ ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments