Thursday, September 19, 2024
Google search engine
Homeತಾಜಾ ಸುದ್ದಿjob alart: ಪಿಎಸ್ ಐ, ಜಿಟಿಟಿಸಿ ಸೇರಿ ವಿವಿಧ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟಿಸಿದ ಪರೀಕ್ಷಾ...

job alart: ಪಿಎಸ್ ಐ, ಜಿಟಿಟಿಸಿ ಸೇರಿ ವಿವಿಧ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟಿಸಿದ ಪರೀಕ್ಷಾ ಪ್ರಾಧಿಕಾರ!

ನಾನಾ ಕಾರಣಗಳಿಂದ ಪದೇಪದೇ ಮುಂದೂಡಿಕೆ ಆಗುತ್ತಿರುವ 402 ಪಿಎಸ್ ಐ ಹುದ್ದೆಗಳ ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿ ಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಣೆ ಮಾಡಿದೆ.

ಯುಪಿಎಸ್‌ಸಿ (UPSC) ಸೇರಿದಂತೆ ನಾನಾ ರಾಷ್ಟ್ರಮಟ್ಟದ ವಿವಿಧ ಪರೀಕ್ಷೆಗಳ ಹಿನ್ನೆಲೆಯಲ್ಲಿ ಎರಡು ಬಾರಿ ಮುಂದೂಡಿಕೆ ಆಗಿದ್ದ 402 ಪಿಎಸ್‌ಐ (PSI) ಹುದ್ದೆಗಳ ಪರೀಕ್ಷೆ ಅಕ್ಟೋಬರ್ 3ರಂದು ನಡೆಸುವುದಾಗಿ ಪರೀಕ್ಷಾ ಪ್ರಾಧಿಕಾರ ಘೋಷಿಸಿದೆ.

ಅಕ್ಟೋಬರ್ 3ರಂದು ಬೆಳಗ್ಗೆ 10:30ರಿಂದ 12:00 ಗಂಟೆಯವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 12:30 ರಿಂದ 02:00 ರವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ ಎಂದು ಕೆಇಎ (KEA) ತಿಳಿಸಿದೆ.

ಪಿಎಸ್‌ಐ ಪರೀಕ್ಷೆ ಜೊತೆಗೆ ವಿವಿಧ ಇಲಾಖೆಗಳ ಪರೀಕ್ಷೆಗಳಿಗೂ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಪ್ರಕಟ ಮಾಡಿದೆ. ಗ್ರಾಮ ಆಡಳಿತಾಧಿಕಾರಿಗಳು ಮತ್ತು ಜಿಟಿಟಿಸಿಯ (GTTC) ವಿವಿಧ ಹುದ್ದೆಗಳಿಗೆ ಸೆ.29 ಮತ್ತು ಅ.26 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅ.7ರಂದು ಪರೀಕ್ಷೆ ನಡೆಯಲಿದೆ.

ಕೆ-ಸೆಟ್ (K-Set) ಪರೀಕ್ಷೆ ಸೇರಿದಂತೆ ರಾಯಚೂರು ವಿವಿ (Raichur) ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನ.24 ರಂದು ಪರೀಕ್ಷೆಗಳು ನಡೆಯಲಿವೆ ಎಂದು ಕೆಇಎ ಮಾಹಿತಿ ನೀಡಿದೆ.

KEA
KEA
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments