ವಿಷಾನೀಲ ಸೊರಿಕೆಯಿಂದ ಗ್ಯಾಸ್ ಸ್ಫೋಟಗೊಂಡ ಪರಿಣಾಮ 51 ಮಂದಿ ಮೃತಪಟ್ಟ ಘಟನೆ ಇರಾನ್ ನ ದಕ್ಷಿಣ ಕೊರೊಸನ್ ನ ಕಲ್ಲಿದ್ದಲ್ಲು ಗಣಿಗಾರಿಕೆಯಲ್ಲಿ ಸಂಭವಿಸಿದೆ.
ಮಡಾಂಜೊವ್ ಕಂಪನಿಯ ಬಿ ಮತ್ತು ಸಿ ಬ್ಲಾಕ್ ನಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ದೇಶದ ಶೇ.60ರಿಂದ 70ರಷ್ಟು ಮಡಾಂಜೊವ್ ವಲಯದಲ್ಲಿ ಕಲ್ಲಿದ್ದಲ್ಲು ಗಣಿಗಾರಿಕೆ ನಡೆಯುತ್ತಿದ್ದು, 8ರಿಂದ 10ರಿಂದ ಕಂಪನಿಗಳು ಟೆಂಡರ್ ಮೂಲಕ ಗಣಿಗಾರಿಕೆ ನಡೆಸುತ್ತಿವೆ. ಸ್ಫೋಟ ಸಂಭವಿಸಿದ ವೇಳೆ 67 ಮಂದಿ ಗಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಬಿ ಬ್ಲಾಕ್ ನಲ್ಲಿ 47 ಕಾರ್ಮಿಕರು ಇದ್ದು, 30 ಮಂದಿ ಮೃತಪಟ್ಟಿದ್ದು, 17 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ 3ರಿಂದ 4 ಗಂಟೆ ಕಾಲ ನಡೆಯಿತು ಎಂದು ಹೇಳಲಾಗಿದೆ.