Monday, September 23, 2024
Google search engine
Homeತಾಜಾ ಸುದ್ದಿStree 2 ಅತಿ ಹೆಚ್ಚು ಲಾಭ ಗಳಿಸಿದ ಚಿತ್ರವಾಗಿ ದಾಖಲೆ ಬರೆದ ಸ್ತ್ರೀ-2!

Stree 2 ಅತಿ ಹೆಚ್ಚು ಲಾಭ ಗಳಿಸಿದ ಚಿತ್ರವಾಗಿ ದಾಖಲೆ ಬರೆದ ಸ್ತ್ರೀ-2!

ರಾಜ್ ಕುಮಾರ್ ಮತ್ತು ಶ್ರದ್ಧಾ ಕಪೂರ್ ನಟಿಸಿದ ಸ್ತ್ರೀ-2 ಚಿತ್ರ ಅತೀ ಹೆಚ್ಚು ಲಾಭ ಪಡೆದ ಚಿತ್ರವಾಗಿ ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿದೆ.

ಸ್ತ್ರೀ-2 ಚಿತ್ರ ಬಿಡುಗಡೆ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದ್ದು, ಹೊಸ ಚಿತ್ರಗಳ ಪೈಪೋಟಿ ನಡುವೆಯೂ ಗಳಿಕೆಯಲ್ಲಿ ಸ್ಥಿರತೆ ಸಾಧಿಸಿದೆ. ಚಿತ್ರದ ಬಜೆಟ್ ಗೆ ಹೋಲಿಸಿದರೆ ಶೇಕಡವಾರು ಅತೀ ಹೆಚ್ಚು ಲಾಭ ಪಡೆದ ಚಿತ್ರ ಎಂಬ ಸಾರ್ವಕಾಲಿಕ ದಾಖಲೆಯನ್ನು ಸ್ತ್ರೀ-2 ಬರೆದಿದೆ.

ಸ್ತ್ರೀ-2 ಚಿತ್ರ 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇದುವರೆಗೆ 577 ಕೋಟಿ ರೂ. ಸಂಗ್ರಹಿಸಿದೆ. ಟಿಕೆಟ್ ಮಾರಾಟದಿಂದಲೇ ಬಜೆಟ್ ಗಿಂತ 9 ಪಟ್ಟು ಆದಾಯ ಗಳಿಸಿ ಮತ್ತೊಂದು ಸಾಧನೆ ಮಾಡಿದೆ.

ಮ್ಯಾಡೊಕ್ ಸಂಸ್ಥೆ ಸ್ತ್ರೀ-2 ಚಿತ್ರವನ್ನು ನಿರ್ಮಿಸಿದೆ. ಇದೇ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಆದ ಮತ್ತೊಂದು ಚಿತ್ರ ಮುನಿಯಾ ಕೂಡ ಬಾಕ್ಸಾಫಿಸ್ ನಲ್ಲಿ ದೊಡ್ಡ ಸದ್ದು ಮಾಡಿತ್ತು. ಸುಮಾರು 30 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಮುನಿಯಾ ಚಿತ್ರ 108 ಕೋಟಿ ರೂ. ಗಳಿಸಿತ್ತು.

2024ನೇ ಸಾಲಿನಲ್ಲಿ ಬಿಡುಗಡೆ ಆದ ರಣಭೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರ 556.36 ಕೋಟಿ ರೂ.ಗಳಿಸಿತ್ತು. ಆದರೆ ಈ ಚಿತ್ರದ ಬಜೆಟ್ 100 ಕೋಟಿ ರೂ. ದಾಟಿತ್ತು. ಸ್ತ್ರೀ-2 ಚಿತ್ರ 600 ಕೋಟಿ ರೂ. ಗಳಿಸಿದ್ದು, ಹಿಂದಿಯಲ್ಲಿ 600 ಕೋಟಿ ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments