Monday, October 7, 2024
Google search engine
Homeಕ್ರೀಡೆಬಾಂಗ್ಲಾ ಟಿ-20 ಸರಣಿಯಿಂದ ಹೊರಬಿದ್ದ ಶಿವಂ ದುಬೆ, ತಿಲಕ್ ಗೆ ಮಣೆ

ಬಾಂಗ್ಲಾ ಟಿ-20 ಸರಣಿಯಿಂದ ಹೊರಬಿದ್ದ ಶಿವಂ ದುಬೆ, ತಿಲಕ್ ಗೆ ಮಣೆ

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೂ ಮುನ್ನ ಭಾರತ ತಂಡದಲ್ಲಿ ಗಾಯದ ಸಮಸ್ಯೆ ಉದ್ಭವಿಸಿದ್ದು, ಕೆಳ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್ ಮನ್ ಗಾಯಗೊಂಡೂ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ಗ್ವಾಲಿಯರ್ ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯಕ್ಕೆ ಮುನ್ನ ಬಿಸಿಸಿಐ ಹೊರಡಿಸಿದ ಪ್ರಕಟಣೆಯಲ್ಲಿ ಆಲ್ ರೌಂಡರ್ ಶಿವಂ ದುಬೆ ಟೂರ್ನಿಯಿಂದ ಹೊರಬಿದ್ದಿದ್ದು, ಬದಲಿ ಆಟಗಾರನಾಗಿ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.

ಶಿವಂ ದುಬೆ ಬೆನ್ನು ನೋವಿನಿಂದ ನರಳುತ್ತಿದ್ದು, ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ದುಬೆ ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಗ್ವಾಲಿಯರ್ ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments