Monday, October 7, 2024
Google search engine
Homeತಾಜಾ ಸುದ್ದಿಅಣಕು ಪ್ರದರ್ಶನದಲ್ಲಿ ಸ್ಫೋಟ: ಅಗ್ನಿವೀರ್ ಯೋಧ ಸಾವು!

ಅಣಕು ಪ್ರದರ್ಶನದಲ್ಲಿ ಸ್ಫೋಟ: ಅಗ್ನಿವೀರ್ ಯೋಧ ಸಾವು!

ಬೆಂಕಿ ನಂದಿಸುವ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ 24 ವರ್ಷದ ಅಗ್ನಿವೀರ್ ಯೋಧ ಮೃತಪಟ್ಟ ದಾರುಣ ಘಟನೆ ರಾಜಸ್ಥಾನ್ ನ ಭರತ್ ಪುರ್ ನಲ್ಲಿ ಸಂಭವಿಸಿದೆ.

ಗೋಲಪುರದಲ್ಲಿರುವ ಸೇನಾ ಪ್ರದೇಶದಲ್ಲಿ ಶನಿವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅಣಕು ಪ್ರದರ್ಶನದ ವೇಳೆ ಸಾಧನ ಸ್ಫೋಟಗೊಂಡ ಪರಿಣಾಮ ಸೌರಭ್ ಪಾಲ್ ಎಂಬುವವರು ಗಾಯಗೊಂಡಿದ್ದಾರೆ.

ಸೌರಭ್ ಪಾಲ್ ಉತ್ತರ ಪ್ರದೇಶದ ಖನ್ನೌಜ್ ನಲ್ಲಿ ಜಿಲ್ಲೆಯ ಭಕಾರ ಗ್ರಾಮದ ನಿವಾಸಿಯಾಗಿದ್ದು, ಅಣಕು ಪ್ರದರ್ಶನದ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಡಿಎಸ್ ಪಿ ಅನಿಲ್ ಜೊಸೊರಿಯಾ ತಿಳಿಸಿದ್ದಾರೆ.

ಪಾಲ್ ಕೇಂದ್ರ ಸರ್ಕಾರದ ನೂತನ ಅಗ್ನಿವೀರ್ ಯೋಜನೆಯಡಿ ಭಾರತೀಯ ಸೇನೆಗೆ 2023ರಲ್ಲಿ ಸೇರಿದ್ದರು. ಪಾಲ್ ನಿಧನದ ಸುದ್ದಿಯನ್ನು ಅವರ ಕುಟುಂಬದವರಿಗೆ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments