Friday, October 18, 2024
Google search engine
Homeಜಿಲ್ಲಾ ಸುದ್ದಿಮಂಡ್ಯದ ಬೈಕ್ ಮೆಕಾನಿಕ್ ಗೆ ಒಲಿದ 25 ಕೋಟಿ ರೂ. ಬಂಪರ್ ಲಾಟರಿ!

ಮಂಡ್ಯದ ಬೈಕ್ ಮೆಕಾನಿಕ್ ಗೆ ಒಲಿದ 25 ಕೋಟಿ ರೂ. ಬಂಪರ್ ಲಾಟರಿ!

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬೈಕ್ ಮೆಕಾನಿಕ್ ಗೆ ಕೇರಳ ರಾಜ್ಯ ಲಾಟರಿಯಲ್ಲಿ 25 ಕೋಟಿ ರೂ. ಬಂಪರ್ ಬಹುಮಾನ ಬಂದಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ.

ಇತ್ತೀಚೆಗಷ್ಟೇ ಕೇರಳಕ್ಕೆ ಹೋಗಿದ್ದ ಬೈಕ್ ಮೆಕಾನಿಕ ಅಲ್ತಾಫ್ ಪಾಷಾ, 500 ರೂ.ಗೆ ಎರಡು ಟಿಕೆಟ್ ಖರೀದಿಸಿದ್ದರು. ಬುಧವಾರ ಲಾಟರಿ ಫಲಿತಾಂಶ ನೋಡಿದಾಗ 25 ಕೋಟಿ ರೂ. ಬಹುಮಾನ ಒಲಿದಿದ್ದು ನೋಡಿ ಸಂಭ್ರಮದಲ್ಲಿ ತೇಲಾಡಿದ್ದಾರೆ. ಇದೀಗ ಬಹುಮಾನ ಮೊತ್ತ ಪಡೆಯಲು ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕಳೆದ 15 ವರ್ಷದಿಂದ ಲಾಟರಿ ಟಿಕೆಟ್ ಪಡೆಯುತ್ತಿದ್ದೆ. ಕರ್ನಾಟಕದ ಲಾಟರಿ ಟಿಕೆಟ್ ಇದ್ದಾಗಲೂ ಲಾಟರಿ ಪಡೆಯುತ್ತಿದ್ದೆ. ಆದರೆ ಇದರಿಂದ ನಷ್ಟ ಆಗಿದ್ದು ಬಿಟ್ಟರೆ ಏನೂ ಆಗಿರಲಿಲ್ಲ. ಇದೀಗ ಇಷ್ಟು ದಿನದ ಶ್ರಮಕ್ಕೆ ಒಳ್ಳೆಯ ಬಹುಮಾನವೇ ಸಿಕ್ಕಿದೆ ಎಂದು ಅಲ್ತಾಫ್ ಸಂಭ್ರಮ ಹಂಚಿಕೊಂಡಿದ್ದಾರೆ.

ಲಾಟರಿಯಲ್ಲಿ ಹಣ ಗೆದ್ದಿದ್ದೇನೆ ಎಂದು ಗೊತ್ತಾದಾಗ ನಂಬಲಾಗಲಿಲ್ಲ. ಮನೆಯವರು ಮೊದಲಿಗೆ ನಂಬಲಿಲ್ಲ. ಆನ್​ಲೈನ್​ನಲ್ಲಿ ನೋಡಿದ ಬಳಿಕವಷ್ಟೆ ಎಲ್ಲರಿಗೂ ನಂಬಿಕೆ ಬಂತು. ಈ ಹಣದಿಂದ ಅದ್ದೂರಿಯಾಗಿ ಮಗಳ ಮದುವೆ ಮಾಡಬೇಕು ಅಂದುಕೊಂಡಿದ್ದೇನೆ. ಒಂದು ಮನೆ ಖರೀದಿ ಮಾಡುತ್ತೇನೆ. ಮೆಕಾನಿಕ್ ಕೆಲಸ ಬಿಟ್ಟು ಬೇರೆ ಬಿಸಿನೆಸ್ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಅಲ್ತಾಫ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments