Friday, October 25, 2024
Google search engine
Homeಜಿಲ್ಲಾ ಸುದ್ದಿನಿಖಿಲ್ ಕುಮಾರಸ್ವಾಮಿ 113 ಕೋಟಿ ರೂ. ಒಡೆಯ: 70 ಕೋಟಿ ಸಾಲಗಾರ!

ನಿಖಿಲ್ ಕುಮಾರಸ್ವಾಮಿ 113 ಕೋಟಿ ರೂ. ಒಡೆಯ: 70 ಕೋಟಿ ಸಾಲಗಾರ!

ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್ ನ ನಿಖಿಲ್‌ ಕುಮಾರಸ್ವಾಮಿ 113 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಶುಕ್ರವಾರ ನಾಮಪತ್ರ ಸಲ್ಲಿಸಿದ ವೇಳೆ ನಿಖಿಲ್ ಕುಮಾರಸ್ವಾಮಿ ತಮ್ಮ ಆಸ್ತಿ ವಿವರಗಳನ್ನು ನೀಡಿದ್ದು, ಬಿಬಿಎ ಪದವೀಧರ ಎಂದು ಅಫಿದಾವಿತ್ ಸಲ್ಲಿಸಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ 113 ಕೋಟಿ ಆಸ್ತಿ ಹೊಂದಿದ್ದು, ಇದರಲ್ಲಿ 78.15 ಕೋಟಿ ಮೌಲ್ಯದ ಚರಾಸ್ತಿ, 29.34 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.  ಒಟ್ಟು 70.44 ಕೋಟಿ ಸಾಲ ಹೊಂದಿದ್ದು, ಪತ್ನಿ ರೇವತಿ ಹೆಸರಲ್ಲಿ 4.96 ಕೋಟಿ ಸಾಲ ಇದೆ.

ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ 1.488 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಹಾಗೂ ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್ ಇದೆ. 1 ಇನ್ನೋವಾ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ ಎರಡು ಕ್ಯಾರಾವ್ಯಾನ್, 1 ಇನ್ನೋವಾ ಕ್ರಿಸ್ಟ ಕಾರು ಇದೆ.

ಪತ್ನಿ ರೇವತಿ ನಿಖಿಲ್ ಹೆಸರಲ್ಲಿ 5.49 ಕೋಟಿ ಮೌಲ್ಯದ ಚರಾಸ್ತಿ, 43 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಆವ್ಯಾನ್ ದೇವ್ ಹೆಸರಲ್ಲಿ 11 ಲಕ್ಷ ಹಣ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments