Friday, November 22, 2024
Google search engine
Homeತಾಜಾ ಸುದ್ದಿಹಳಿ ಮೇಲಿದ್ದ 6 ಕೆಜಿ ತೂಕದ ಮರದ ತುಂಡಿಗೆ ಡಿಕ್ಕಿ ಹೊಡೆದ ರೈಲು!

ಹಳಿ ಮೇಲಿದ್ದ 6 ಕೆಜಿ ತೂಕದ ಮರದ ತುಂಡಿಗೆ ಡಿಕ್ಕಿ ಹೊಡೆದ ರೈಲು!

ರೈಲ್ವೆ ಹಳಿ ಮೇಲೆ 6 ಕೆಜಿ ತೂಕದ ಬೃಹತ್ ಮರದ ತುಂಡಿಗೆ ರೈಲು ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ದುಷ್ಕರ್ಮಿಗಳು ಕೃತ್ಯ ಇದಾಗಿರಬೇಕು ಎಂದು ಶಂಕಿಸಲಾಗಿದೆ.

ಗುರುವಾರ ರಾತ್ರಿ ಉತ್ತರ ಪ್ರದೇಶದ ದೆಹಲಿ ಮತ್ತು ಲಕ್ನೋ ನಡುವೆ ಸಂಚರಿಸುವ ಬರೇಲಿ-ವಾರಣಾಸಿ ಎಕ್ಸ್ ಪ್ರೆಸ್ ಪ್ರಯಾಣಿಕ ರೈಲು ಸುಮಾರು 2 ಅಡಿ ಉದ್ದದ ಮರದ ತುಂಡಿಗೆ ಡಿಕ್ಕಿ ಹೊಡೆದಿದೆ.

ರೈಲು ಮರದ ತುಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲು ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿದೆ. ಪೈಲೆಟ್ ಸಮಯಪ್ರಜ್ಞೆಯಿಂದ ರೈಲು ಅಪಾಯವಿಲ್ಲದೇ ನಿಂತಿದೆ. ಇಂಜಿನ್ ನ ಕೆಳಭಾಗದಲ್ಲಿ ಸ್ವಲ್ಪ ಸ್ಪರ್ಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ರೈಲ್ವೆ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿತ್ತು. ನಂತರ 10 ಡಿಟೊನೇಟರ್ ಸ್ಫೋಟಕಗಳು ಪತ್ತೆಯಾದ ನಂತರ ಮರದ ತುಂಡು ಪತ್ತೆಯಾಗಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಮರದ ತುಂಡು ಹಾಕಿರಬೇಕು ಎಂದು ಶಂಕಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments