ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರನ್ನು 21 ಕೋಟಿ ರೂ. ಮೊತ್ತಕ್ಕೆ ಉಳಿಸಿಕೊಂಡಿದೆ.
ಅಕ್ಟೋಬರ್ 31 ಐಪಿಎಲ್ ಫ್ರಾಂಚೈಸಿಗಳು ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಕೊನೆಯ ದಿನವಾಗಿದ್ದು, ಕೊಹ್ಲಿಯನ್ನು 21 ಕೋಟಿಗೆ ಆರ್ ಸಿಬಿ ಉಳಿಸಿಕೊಂಡಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಅವರನ್ನು 23 ಕೋಟಿ ರೂ.ಗೆ ಉಳಿಸಿಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ತಂಡ ಉಳಿಸಿಕೊಂಡ ಆಟಗಾರ ಎಂಬ ಗೌರವಕ್ಕೆ ಕ್ಲಾಸೆನ್ ಪಾತ್ರರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 16.5 ಕೋಟಿ ರೂ.ಗೆ 5 ಬಾರಿ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್ ಶರ್ಮ ಅವರನ್ನು ಉಳಿಸಿಕೊಂಡಿದೆ.
ಕೆಎಲ್ ರಾಹುಲ್, ರಿಷಬ್ ಪಂತ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ತಂಡದಿಂದ ಕೈಬಿಡಲಾದ ಪ್ರಮುಖ ಆಟಗಾರರಾಗಿದ್ದಾರೆ.