ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿ ಮಾಡಲು ಪತ್ನಿ ವಿಜಯಲಕ್ಷ್ಮೀ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.
ದರ್ಶನ್ ಜೈಲಿನಿಂದ ಬಿಡುಗಡೆ ಆಗಲು ದೇವಸ್ಥಾನಗಳಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮೀ ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಲಿ ಎಂಬ ಕಾರಣಕ್ಕೆ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.
ದರ್ಶನ್ ಬೆನ್ನು ನೋವು ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಈಗಾಗಲೇ ಹೈಕೋರ್ಟ್ ಗೆ ವರದಿ ನೀಡಿದ್ದಾರೆ. ಲೇಸರ್ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ದರ್ಶನ್ ಕುಟುಂಬದ ಬಳಿ ಸಮಯ ಕೇಳಿದ್ದಾರೆ.
ವೈದ್ಯರಿಗೆ ದಿನಾಂಕ ತಿಳಿಸುವುದಾಗಿ ಹೇಳಿರುವ ವಿಜಯಲಕ್ಷ್ಮೀ ಕೆಲವು ದಿನಗಳ ಹಿಂದೆ ಜ್ಯೋತಿಷಿಗಳನ್ನು ಭೇಟಿ ಮಾಡಿ ಶಸ್ತ್ರಚಿಕಿತ್ಸೆಗೆ ಸೂಕ್ತ ದಿನಾಂಕ ನೀಡುವಂತೆ ಮನವಿ ಮಾಡಿದ್ದಾರೆ. ಜ್ಯೋತಿಷಿಗಳು ಇನ್ನೂ ಸಮಯ ನೀಡದ ಕಾರಣ ದರ್ಶನ್ ಅವರ ಶಸ್ತ್ರಚಿಕಿತ್ಸೆ ತಡವಾಗುತ್ತಿದೆ. ಇದರಿಂದ ಕೋರ್ಟ್ ವಿಚಾರಣೆಯೂ ತಡವಾಗುತ್ತಿದೆ ಎಂದು ಹೇಳಲಾಗಿದೆ.