ನಾಯಕ ಜಸ್ ಪ್ರೀತ್ ಬುಮ್ರಾ ನೇತೃತ್ವದಲ್ಲಿ ಮಧ್ಯಮ ವೇಗಿಗಳ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ 104 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಮಹತ್ವದ 46 ರನ್ ಗಳ ಮಹತ್ವದ ಮುನ್ನಡೆ ಪಡೆದಿದೆ.
ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 67 ರನ್ ಗೆ 7 ವಿಕೆಟ್ ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ಭೋಜನ ವಿರಾಮಕ್ಕೂ ಮುನ್ನವೇ 104 ರನ್ ಗೆ ಪತನಗೊಂಡಿತು.
ಭಾರತದ ಪರ ಬುಮ್ರಾ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರೆ, ಚೊಚ್ಚಲ ಪಂದ್ಯದಲ್ಲದೇ ರಾಣಾ 3 ವಿಕೆಟ್ ಗಳಿಸಿದರೆ, ಮೊಹಮದ್ ಸಿರಾಜ್ 2 ವಿಕೆಟ್ ಗಳಿಸಿದರು.
ಆಸ್ಟ್ರೇಲಿಯಾ ದಿನದ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು 79 ರನ್ ಗೆ 9 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಮಿಚೆಲ್ ಸ್ಟಾರ್ಕ್ 112 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 26 ರನ್ ಗಳಿಸಿದ್ದೂ ಅಲ್ಲದೇ 10ನೇ ವಿಕೆಟ್ ಗೆ ಜೋಶ್ ಹಾಜ್ಲೆವುಡ್ (6 ರನ್, 31 ಎಸೆತ) ಜೊತೆ 25 ರನ್ ಜೊತೆಯಾಟ ನಿಭಾಯಿಸಿ ತಂಡದ ಮೊತ್ತ 100ರ ಗಡಿ ದಾಟಿಸಿದರು.