Saturday, 31 October 2026 — Kannadavahini
BREAKING NEWS
ಮನರಂಜನೆ ಇಂದಿನಿಂದ 3 ದಿನ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ! ರಾಜ್ಯ ಹಾಸನಾಂಬೆ ಗರ್ಭಗುಡಿ ಓಪನ್: ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ರಾಜ್ಯ ನ.1ರಿಂದ ಹಾಲು, ಸಾರಿಗೆ ದರ ಏರಿಕೆ: ದೀಪಾವಳಿಗೆ ರೈತರಿಗೆ ಸಿಹಿ, ಜನರಿಗೆ ದುಬಾರಿ! ಅಪರಾಧ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ: ಸಿಸಿಬಿ ತನಿಖೆಯಲ್ಲಿ ಪತ್ತೆ ರಾಜ್ಯ ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ಮನರಂಜನೆ ಇಂದಿನಿಂದ 3 ದಿನ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ! ರಾಜ್ಯ ಹಾಸನಾಂಬೆ ಗರ್ಭಗುಡಿ ಓಪನ್: ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ರಾಜ್ಯ ನ.1ರಿಂದ ಹಾಲು, ಸಾರಿಗೆ ದರ ಏರಿಕೆ: ದೀಪಾವಳಿಗೆ ರೈತರಿಗೆ ಸಿಹಿ, ಜನರಿಗೆ ದುಬಾರಿ! ಅಪರಾಧ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ: ಸಿಸಿಬಿ ತನಿಖೆಯಲ್ಲಿ ಪತ್ತೆ ರಾಜ್ಯ ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ
ರಾಜ್ಯ

ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಅಂತ ಅನರ್ಹರ ಬಿಪಿಎಲ್ ಕಾರ್ಡ್ ರದ್ದು: ಸಿಎಂ ಸಿದ್ದರಾಮಯ್ಯ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 5 ವೀಕ್ಷಣೆಗಳು
siddaraimah
siddaraimah

ನಾನು ಬಡತನ ರೇಖೆಗಿಂತ ಕೆಳಗಿಲ್ಲ. ಹೀಗಾಗಿ ಅನ್ನಭಾಗ್ಯ ನನಗೆ ಸಿಗಬಾರದು. ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೆ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್ ಗೆ ಬದಲಾಗಿದೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕೆ.ಆರ್.ಪೇಟೆಯಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಹಲವು ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.

ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೆ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್ ಗೆ ಬದಲಾಗಿದೆ ಅಷ್ಟೆ. ತೆರಿಗೆ ಕಟ್ಟುವವರಿಗೆ ಅನ್ನಭಾಗ್ಯದ ಅಗತ್ಯ ಇಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.

ಈ ದೇಶಕ್ಕೆ ಸಿಕ್ಕ ರಾಜಕೀಯ ಸ್ವಾತಂತ್ರ್ಯ ಯಶಸ್ವಿ ಆಗಬೇಕಾದರೆ, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ ಈ ಕಾರಣಕ್ಕೇ ನಾವು ಅನ್ನ ಭಾಗ್ಯ ಮತ್ತು ಆರ್ಥಿಕ ಶಕ್ತಿ ಕೊಡುವ ಐದೈದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.

ಬಡ ಕುಟುಂಬದವರ ಮತ್ತು ನಮ್ಮ ಹೆಣ್ಣು ಮಕ್ಕಳ ಹಣ ಉಳಿತಾಯ ಆಗಲಿ ಎನ್ನುವ ಕಾರಣದಿಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ನಮ್ಮ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ ಎಂದರು.

ಕೈಯಲ್ಲಿ ಕಾಸಿದ್ದರೆ ತಾನೆ ನಮ್ಮ ಜನ ಖರೀದಿಗೆ ಹೋಗೋದು. ಅದಕ್ಕೇ ಜನರ ಕೈಯಲ್ಲಿ ಕಾಸು ಇರುವ ಯೋಜನೆ ಜಾರಿ ಮಾಡಿದ್ದೇವೆ. ಕೆ.ಆರ್.ಪೇಟೆಯಲ್ಲಿ ಹಾಳಾಗಿರುವ ರಸ್ತೆ, ಕೆರೆ, ಸೇತುವೆಗೆ ಹಣ ಕೊಡಬೇಕು ಎನ್ನುವ ಮನವಿ ಬಂದಿದೆ. ನಾವು ಬೇಡಿಕೆಗೆ ತಕ್ಕಷ್ಟು ಹಣವನ್ನು ಖಂಡಿತಾ ಬಿಡುಗಡೆ ಮಾಡ್ತೀನಿ ಎಂದು ಭರವಸೆ ನೀಡಿದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8396 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment