ಮೆಕ್ಸಿಕನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಮಂಕಿ ಫ್ರಾಂಗ್ ವಿಷ ಸೇವನೆಯಿಂದ ಸಾಕ್ಷ್ಯಚಿತ್ರ ನಟಿ ಮೃತಪಟ ಆಘಾತಕಾರಿ ನಡೆದಿದೆ.
ಕಾಂಬೊ ಹೆಸರಿನ ಕಾರ್ಯಕ್ರಮದಲ್ಲಿ ಸಂಪ್ರದಾಯದ ಅಂಗವಾಗಿ ಮೆಕ್ಸಿಕನ್ ನಟಿ ಮಾರ್ಸೆಲಾ ಅಲ್ಕಾರೆಜ್ ರೋಡ್ರಿಗಜ್ ಅಮೆಜಾನ್ ನ ದೈತ್ಯ ಕಪ್ಪೆಯ ವಿಷ ಸೇವಿಸಿದ್ದು ಎಡವಟ್ಟು ಆಗಿ ಸಾವಿಗೀಡಾಗಿದ್ದಾರೆ.
ಡಿಸೆಂಬರ್ 1 ರಂದು ಈ ಘಟನೆ ನಡೆದಿದ್ದು, ಅಲ್ಕಾರೆಜ್ ರೋಡ್ರಿಗಜ್ ಕಪ್ಪೆ ವಿಷ ಸೇವಿಸುತ್ತಿದ್ದಂತೆ ವಾಂತಿ ಮಾಡಲು ಶುರು ಮಾಡಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ದಕ್ಷಿಣ ಆಫ್ರಿಕಾದ ಸಾಂಪ್ರದಾಯಿಕ ಕಾಂಬೊ ಧಾರ್ಮಿಕ ಕಾರ್ಯಕ್ರಮದಲ್ಲಿ ಬಳಸುವ ಮಂಕಿ ಫ್ರಾಗ್ ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಇದನ್ನು ಕೆಲವು ದೇಶಗಳಲ್ಲಿ ನಿಷೇಧಿಸಲಾಗಿದೆ.
ನಟಿ ಮೆಕ್ಸಿಕೊದಲ್ಲಿ ಇದ್ದಾಗ ಡಿಪ್ಲಮೊ ತರಬೇತಿ ಅಂಗವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಮಂಕಿ ಫ್ರಾಗ್ ವಿಷ ಮಿಶ್ರಣದ ಕಾಂಬೊ ಸೇವಿಸಿದ್ದರು.
ಮೆಕ್ಸಿಕನ್ ಪ್ರೊಡಾಕ್ಷನ್ ಕಂಪನಿ ಮಪಾಚಿ ಫಿಲ್ಮ್ಸ್ ನಲ್ಲಿ ಪಾಲ್ಗೊಂಡಿದದ್ ಅಲ್ಕಾರೆಜ್ ರೋಡ್ರಿಗಜ್ ಮಂಕಿ ಫ್ರಾಗ್ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದರು. ಆದರೆ ಆಕೆ ಚಿಕಿತ್ಸೆ ಪಡೆಯಲು ಆರಂಭದಲ್ಲಿ ನಿರಾಕರಿಸಿದರು. ಇದು ದೇಹ ಶುದ್ಧಿಗೊಳಿಸುತ್ತದೆ ಎಂದು ಭಾವಿಸಿದ್ದರು. ಆದರೆ ಆಕೆಯ ಸ್ಥಿತಿ ಹಂತ ಹಂತವಾಗಿ ಶೋಚನೀಯಗೊಂಡಾಗ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ದಾಖಲಿಸಿದ್ದು ತಡವಾಗಿದ್ದರಿಂದ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮೂಲಗಳು ಹೇಳಿವೆ.