ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ನಾಳೆ ಕೇಂದ್ರ ಸರ್ಕಾರ ಸಂಸತ್ ನಲ್ಲಿ ಮಂಡಿಸುವ ಸಾಧ್ಯತೆ ಇದೆ.
ಮಂಗಳವಾರ ಸಾಂವಿಧಾನಿಕ 129ನೇ ಮಸೂದೆ 2024 ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಲ್ ಮಂಡಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಮೇಘಾವಲ್ ನಾಳೆ ಮಸೂದೆಯನ್ನು ಲೋಸಕಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಮುಂದೆ ಮಂಡಿಸಲಿದ್ದು, ಜಂಟಿ ಸದನ ಸಮಿತಿಗೆ ಶಿಫಾರಸು ಮಾಡುವಂತೆ ಮನವಿ ಮಾಡಲಿದ್ದಾರೆ.
ಜಂಟಿ ಸದನ ಸಮಿತಿಗೆ ಬಿಜೆಪಿ ಸದಸ್ಯರು ಮುಖ್ಯಸ್ಥರಾಗಿದ್ದು, ಹಲವು ಪ್ರತಿಪಕ್ಷಗಳ ನಾಯಕರು ಕೂಡ ಇದ್ದಾರೆ. ಸಮಿತಿಯು ಎರಡು ತಿಂಗಳ ಒಳಗಾಗಿ ಅಂಕಿ-ಅಂಶಗಳ ಸಮೇತ ವರದಿ ನೀಡುವಂತೆ ಸೂಚಿಸಲಾಗುವುದು.