Home ಜ್ಯೋತಿಷ್ಯ ವಾಸ್ತುದೋಷದಿಂದ ಏನೆಲ್ಲಾ ಸಮಸ್ಯೆ ಬರುತ್ತೆ ಗೊತ್ತಾ? ವಾಸ್ತು ಹೇಗಿರಬೇಕು ಇಲ್ಲಿದೆ ಮಾಹಿತಿ!

ವಾಸ್ತುದೋಷದಿಂದ ಏನೆಲ್ಲಾ ಸಮಸ್ಯೆ ಬರುತ್ತೆ ಗೊತ್ತಾ? ವಾಸ್ತು ಹೇಗಿರಬೇಕು ಇಲ್ಲಿದೆ ಮಾಹಿತಿ!

ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆ ಎದುರಿಸಬಹುದು. ಈ ನಿಯಮಗಳನ್ನು ಅನುಸರಿಸಿದರೆ ಏನೆಲ್ಲಾ ಲಾಭ ಎಂಬ ಮಾಹಿತಿ ಇಲ್ಲಿದೆ.

by Editor
0 comments
vastu

ವಾಸ್ತುಪ್ರಕಾರ ಮನೆ ಕಟ್ಟಿದರೆ ಸಾಲದು, ಜಮೀನು, ಗಿಡಗಳನ್ನು ಇಡುವುದು, ಓದುವ ಜಾಗ ಮುಂತಾದ ವಿಷಯಗಳ ಕಡೆಗೂ ಗಮನ ಹರಿಸಬೇಕು. ಇಲ್ಲದಿದ್ದರೆ ಯಾವುದೋ ಒಂದು ಸಣ್ಣ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸಬಹುದು.

ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆ ಎದುರಿಸಬಹುದು. ಈ ನಿಯಮಗಳನ್ನು ಅನುಸರಿಸಿದರೆ ಏನೆಲ್ಲಾ ಲಾಭ ಎಂಬ ಮಾಹಿತಿ ಇಲ್ಲಿದೆ.

ವಾಸ್ತುವನ್ನು ಪರಿಪಾಲಿಸುವುದರೊಂದಿಗೆ ಪ್ರಕೃತಿಯನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.

ವಾಸ್ತುವಿನ ನಿಯಮದಂತೆ ದಕ್ಷಿಣ ಮತ್ತು ಪಶ್ಚಿಮದಲ್ಲಿ ಎತ್ತರವಾದ ಗಿಡಗಳು ಕಟ್ಟಡಗಳು ಬರುವಂತೆ ನೋಡಿಕೊಳ್ಳಬೇಕು.

banner

ವಾಸ್ತುವಿನ ನಿಯಮದಂತೆ ತಮ್ಮ ಜಮೀನುಗಳಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ದೊಡ್ಡ ಮರಗಳು ದಕ್ಷಿಣ ಮತ್ತು ಪಶ್ಚಿಮಕ್ಕೆ ಬರುವಂತೆ ನೋಡಿಕೊಳ್ಳಿ ಇದರಿಂದ ಎಲ್ಲಾ ರೀತಿಯ ಅನುಕೂಲತೆಗಳು ದೊರೆಯುತ್ತವೆ.

ಮಳೆ ಕೊಯ್ಲು ಗುಂಡಿಯನ್ನು ಮಾಡಿಕೊಳ್ಳುವವರು ಪೂರ್ವ ಮತ್ತು ಉತ್ತರದಲ್ಲಿ ಮಾಡಿಕೊಳ್ಳಬೇಕು.

ಮಳೆ ಕೋಯ್ಲುಗುಂಡಿಯನ್ನು ಮಾಡಿಕೊಳ್ಳುವುದರಿಂದ ಅಂತರ್ಜಲದ ನೀರಿನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು.

ಮಳೆ ಕೋಯ್ಲುಗುಂಡಿಯನ್ನು ಮಾಡಿಕೊಳ್ಳುವುದರಿಂದ ಅಪ್ರತ್ಯಕ್ಷವಾಗಿ ಪ್ರಕೃತಿಗೆ ಸಹಾಯ ಮಾಡಿದಂತಾಗಿರುತ್ತದೆ.

ಬೋರು ಮತ್ತು ಬಾವಿ ಈಶಾನ್ಯ-ಉತ್ತರ ಹಾಗೂ ಪೂರ್ವ ಭಾಗದಲ್ಲಿ ಮಾಡಿಕೊಂಡರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

ಉತ್ತರ-ಈಶಾನ್ಯ ಭಾಗದಲ್ಲಿ ಬಾವಿ, ಬೋರ್ ಇದ್ದಲ್ಲಿ ಹಣಕಾಸಿನ ಅಭಿವೃದ್ಧಿ ತುಂಬಾ ಇರುತ್ತದೆ.

ಪೂರ್ವ ಈಶಾನ್ಯ ಭಾಗದಲ್ಲಿ ಬಾವಿ ಬೋರ್ ಇದ್ದಲ್ಲಿ ಒಳ್ಳೆಯ ಹೆಸರಿನ ಜೊತೆಗೆ ಸಂಪತ್ಭರಿತ ಜೀವನ ಇರುತ್ತದೆ.

ಪೂರ್ವ ಭಾಗದಲ್ಲಿ ಬಾವಿ ಬೋರ್ ಇದ್ದಲ್ಲಿ ಆರೋಗ್ಯ, ಐಶ್ವರ್ಯಾಭಿವೃದ್ಧಿ ತಂತಾನೆ ದೊರೆಯುತ್ತದೆ.

ಪೂರ್ವ ಆಗ್ನೇಯ ಭಾಗದಲ್ಲಿ ಬಾವಿ ಬೋರ್ ಇದ್ದಲ್ಲಿ ಚರ್ಮರೋಗ ಬರುವಂತಹ ಸಾಧ್ಯತೆ ಹೆಚ್ಚು.

ದಕ್ಷಿಣ ಆಗ್ನೇಯ ಭಾಗದಲ್ಲಿ ಬಾವಿ ಬೋರ್ ಇದ್ದಲ್ಲಿ ಚರ್ಮರೋಗದೊಂದಿಗೆ ಕಿರಿ-ಕಿರಿ ಸಹ ಇರುತ್ತದೆ.

ದಕ್ಷಿಣ ಭಾಗದಲ್ಲಿ ಬಾವಿ ಬೋರ್ ಇದ್ದಲ್ಲಿ ಆರೋಗ್ಯ ತೊಂದರೆಯ ಜೊತೆಗೆ ಖರ್ಚು ಹೆಚ್ಚು.

ದಕ್ಷಿಣ ನೈಋತ್ಯ ಭಾಗದಲ್ಲಿ ಬೋರ್ ಬಾವಿ ಇದ್ದಲ್ಲಿ ಹೆಚ್ಚು ಕಷ್ಟಗಳೊಂದಿಗೆ ಆರೋಗ್ಯದ ಸಮಸ್ಯೆಯು ಸಹ ಇರುತ್ತದೆ. ಇದು ಹೆಣ್ಣು ಮಕ್ಕಳಿಗೆ ಹೆಚ್ಚು ಪರಿಣಾಮ ಇರುತ್ತದೆ.

ಪಶ್ಚಿಮ ನೈಋತ್ಯ ಭಾಗದಲ್ಲಿ ಹೆಚ್ಚು ಕಷ್ಟಗಳೊಂದಿಗೆ ಆರೋಗ್ಯದ ಸಮಸ್ಯೆಯು ಸಹ ಇರುತ್ತದೆ. ಇದು ಗಂಡು ಮಕ್ಕಳಿಗೆ ಹೆಚ್ಚು ಪರಿಣಾಮ ಇರುತ್ತದೆ.

ಪಶ್ಚಿಮ ಭಾಗದಲ್ಲಿ ಬೋರ್ ಬಾವಿ ಇದ್ದಲ್ಲಿ ಮನೆಯ ಹಿರಿಯರಿಗೆ ಆರೋಗ್ಯದ ತೊಂದರೆ, ಹಣಕಾಸಿನ ಮುಗ್ಗಟ್ಟು ಇರುತ್ತದೆ.

ಪಶ್ಚಿಮ ವಾಯುವ್ಯ ಭಾಗದಲ್ಲಿ ಬೋರ್ ಬಾವಿ ಇದ್ದಲ್ಲಿ ಹೆಣ್ಣು ಮಕ್ಕಳ ಆರೋಗ್ಯಕ್ಕೆ ತೊಂದರೆ ಕೊಡುವುದರೊಂದಿಗೆ ನರ ದೌರ್ಬಲ್ಯ ಹಾಗೂ ವಿವಾದಾತ್ಮಕ ವಿವಾಹಗಳನ್ನು ಸೃಷ್ಠಿಸುತ್ತದೆ.

ಉತ್ತರ ವಾಯುವ್ಯ ಭಾಗದಲ್ಲಿ ಬೋರ್ ಬಾವಿ ಇದ್ದಲ್ಲಿ ಗಂಡು ಮಕ್ಕಳ ಆರೋಗ್ಯಕ್ಕೆ ತೊಂದರೆ ಕೊಡುವುದರೊಂದಿಗೆ ನರ ದೌರ್ಬಲ್ಯ ಹಾಗೂ ವಿವಾದಾತ್ಮಕ ವಿವಾಹಗಳನ್ನು ಸೃಷ್ಠಿಸುತ್ತದೆ.

ಉತ್ತರ ಭಾಗದಲ್ಲಿ ಬೋರ್ ಬಾವಿ ಇದ್ದರೆ ಹಣಕಾಸಿನ ಉತ್ತರೋತ್ತರ ಅಭಿವೃದ್ಧಿ ದೊರೆಯುತ್ತದೆ.

ಓದುವ ಮಕ್ಕಳು ಉತ್ತರ ಭಾಗದಲ್ಲಿ, ಪೂರ್ವ ಭಾಗದಲ್ಲಿ ಹಾಗೂ ಈಶಾನ್ಯ ಭಾಗದಲ್ಲಿ ಕುಳಿತು ಓದಿದರೆ ತುಂಬಾ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

ಓದುವ ಮಕ್ಕಳು ನೈಋತ್ಯ ಭಾಗದಲ್ಲಿ ಮಲಗಿಕೊಂಡಲ್ಲಿ ಹಠಮಾರಿಗಳಾಗುತ್ತಾರೆ.

ಓದುವ ಮಕ್ಕಳು ಪಶ್ಚಿಮ ಭಾಗದಲ್ಲಿ ಮಲಗಿಕೊಂಡಲ್ಲಿ ಓದುವ ಆಸಕ್ತಿ ಸ್ವಲ್ಪ ಕಡಿಮೆಯಾಗುತ್ತದೆ.

ಓದುವ ಮಕ್ಕಳು ವಾಯುವ್ಯ ಭಾಗದಲ್ಲಿ ಕುಳಿತು ಓದಿದರೆ ಜಾಣರಿರುತ್ತಾರೆ ಆದರೆ, ಸ್ವಲ್ಪ ಆಟಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ.

ಓದುವ ಮಕ್ಕಳು ಉತ್ತರ ಭಾಗದಲ್ಲಿ ಕುಳಿತು ಓದಿದರೆ ಒಳ್ಳೆಯದು.

ಓದುವ ಮಕ್ಕಳು ಈಶಾನ್ಯ ಭಾಗದಲ್ಲಿ ಕುಳಿತು ಓದಿದರೆ ಸ್ವಲ್ಪ ಸಿಟ್ಟಿನ ಸ್ವಭಾವ ಇರುತ್ತದೆ. ಆದರೆ, ಜಾಣರಿರುತ್ತಾರೆ.

ಓದುವ ಮಕ್ಕಳು ಪೂರ್ವ ಭಾಗದಲ್ಲಿ ಕುಳಿತು ಓದಿದರೆ ತುಂಬಾ ಒಳ್ಳೆಯದು.

ಓದುವ ಮಕ್ಕಳು ಆಗ್ನೇಯ ಭಾಗದಲ್ಲಿ ಕುಳಿತು ಓದಿದರೆ ಸ್ವಲ್ಪ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಆದರೆ ಪಾದರಸದಂತೆ ತುಂಬಾ ಚಾಣಾಕ್ಷರಾಗಿರುತ್ತಾರೆ.

ಮೆಟ್ಟಿಲುಗಳ ಸಂಖ್ಯೆ ಬೆಸ ಸಂಖ್ಯೆಯಾಗಿರಬೇಕು. ಲ್ಯಾಂಡ್ ಮತ್ತು ಲ್ಯಾಂಡಿಂಗ್ ಇದಕ್ಕೆ ಸೇರುವುದಿಲ್ಲ.

ಮನೆಯಿಂದ ಹೊರ ಹೋಗುವಾಗ 1, 3, 5 ಈ ರೀತಿಯಲ್ಲಿ ನೇರವಾಗಿ ರಸ್ತೆಗೆ ಮುಖವಿರುವಂತೆ ಮೆಟ್ಟಿಲುಗಳನ್ನು ನಿರ್ಮಿಸಿಕೊಳ್ಳಬೇಕು.

ಮನೆಯ ಒಳಗೆ ಮೆಟ್ಟಿಲುಗಳು ದಕ್ಷಿಣ ಭಾಗದಲ್ಲಿ ಅಥವಾ ಪಶ್ಚಿಮ ಭಾಗದಲ್ಲಿ ಇರುವುದು ಒಳ್ಳೆಯದು.

ಮನೆಯ ಒಳಗೆ ಮೆಟ್ಟಿಲುಗಳು ಪೂರ್ವ ಭಾಗದಲ್ಲಿದ್ದರೆ ಗರ್ಭಕೋಶದ ತೊಂದರೆಯೊಂದಿಗೆ ಸಂಸಾರದ ಸುಖ ದೊರೆಯದು.

ಮನೆಯ ಒಳಗೆ ಮೆಟ್ಟಿಲುಗಳು ಈಶಾನ್ಯಭಾಗದಲ್ಲಿದ್ದರೆ. ಹಣಕಾಸಿನ ಮುಗ್ಗಟ್ಟಿನೊಂದಿಗೆ ಹೃದಾಯಾಘಾತದಂತಹ ತೊಂದರೆಗಳು ಬರಬಹುದು.

ಮನೆಯ ಒಳಗೆ ಮೆಟ್ಟಿಲುಗಳು ಉತ್ತರ ಭಾಗದಲ್ಲಿ ಇದ್ದರೆ ಹಣಕಾಸಿನ ತೊಂದರೆ ಖಚಿತ.

ಮನೆಯ ಒಳಗೆ ಮೆಟ್ಟಿಲುಗಳು ನೈಋತ್ಯ ಭಾಗದಲ್ಲಿದ್ದರೆ ಆರೋಗ್ಯ ಹಾಗೂ ಗೌರವದಲ್ಲಿ ದಕ್ಕೆಯಾಗುವಂತಹ ಅವಕಾಶಗಳು ಹೆಚ್ಚು.

ಮನೆಯ ಹೊರಗೆ ಮೆಟ್ಟಿಲುಗಳು ಉತ್ತರ ಮುಖದ ಮನೆ ಇದ್ದಾಗ ವಾಯುವ್ಯ ಭಾಗದಲ್ಲಿ ಬರಬೇಕು.

ಮನೆಯ ಹೊರಗೆ ಮೆಟ್ಟಿಲುಗಳು ಪೂರ್ವ ಮುಖದ ಮನೆ ಇದ್ದಾಗ ಆಗ್ನೇಯ ಭಾಗದಲ್ಲಿ ಬರಬೇಕು.

ಮನೆಯ ಹೊರಗೆ ಮೆಟ್ಟಿಲುಗಳು ದಕ್ಷಿಣ ಮುಖದ ಮನೆ ಇದ್ದಾಗ ನೈಋತ್ಯ ಭಾಗದಲ್ಲಿ ಬರಬೇಕು.

ಮನೆಯ ಹೊರಗೆ ಮೆಟ್ಟಿಲುಗಳು ಪಶ್ಚಿಮ ಮುಖದ ಮನೆ ಇದ್ದಾಗ ನೈಋತ್ಯ ಭಾಗದಲ್ಲಿ ಬರಬೇಕು.

ಈಶಾನ್ಯ ಮೂಲೆಯ ನಿವೇಶನ ಇರುವವರು ನಿವೇಶನದ ಉದ್ದವನ್ನು ನೋಡಿಕೊಂಡು ವಾಯುವ್ಯ ಅಥವಾ ಆಗ್ನೇಯ ಭಾಗದಲ್ಲಿ ಮೆಟ್ಟಿಲುಗಳನ್ನು ಇಟ್ಟುಕೊಳ್ಳಬೇಕು.

ಆಗ್ನೇಯ ಮೂಲೆಯ ನಿವೇಶನ ಇರುವವರು ನಿವೇಶದನ ನೈಋತ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ಇಟ್ಟುಕೊಳ್ಳಬೇಕು.

ನೈಋತ್ಯ ಮೂಲೆಯ ನಿವೇಶನವಿರುವವರು ನಿವೇಶನದ ನೈಋತ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ಇಟ್ಟುಕೊಳ್ಳಬೇಕು.

ವಾಯುವ್ಯ ಮೂಲೆಯ ನಿವೇಶನವಿರುವವರು ನಿವೇಶನದ ನೈಋತ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ಇಟ್ಟುಕೊಳ್ಳಬೇಕು.

ಪೂರ್ವ ಮುಖದ ನಿವೇಶನದವರು ಆಗ್ನೇಯದಲ್ಲಿ ಮೆಟ್ಟಿಲುಗಳನ್ನು ಇರಿಸಿಕೊಂಡಾಗ ಮೆಟ್ಟಿಲು ಕೆಳಗೆ ಇರುವಂತಹ ಸ್ಥಳವನ್ನು ಉಪಯೋಗಿಸಿಕೊಳ್ಳಬಹುದು.

ದಕ್ಷಿಣ ಮುಖದ ನಿವೇಶನದವರು ನೈಋತ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ಇರಿಸಿಕೊಂಡಾಗ ಮೆಟ್ಟಿಲು ಕೆಳಗೆ ಇರುವಂತಹ ಸ್ಥಳವನ್ನು ಉಪಯೋಗಿಸಿಕೊಳ್ಳಬಾರದು.

ಪಶ್ಚಿಮ ಮುಖದ ನಿವೇಶನದವರು ನೈಋತ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ಇರಿಸಿಕೊಂಡಾಗ ಮೆಟ್ಟಿಲು ಕೆಳಗೆ ಇರುವಂತಹ ಸ್ಥಳವನ್ನು ಉಪಯೋಗಿಸಿಕೊಳ್ಳಬಾರದು.

ಉತ್ತರ ಮುಖದ ನಿವೇಶನದವರು ವಾಯುವ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ಇರಿಸಿಕೊಂಡಾಗ ಮೆಟ್ಟಿಲು ಕೆಳಗೆ ಇರುವಂತಹ ಸ್ಥಳವನ್ನು ಉಪಯೋಗಿಸಿಕೊಳ್ಳಬಹುದು.

ಯಾವುದೇ ಮುಖದ ನಿವೇಶನದವರೂ ಸಹ ಮನೆಯ ಹೊರಗೆ ಇರಿಸಿಕೊಂಡತಹ ಮೆಟ್ಟಿಲುಗಳ ಕೆಳಗೆ ಶೌಚಾಲಯಗಳ ಮಾಡಿಕೊಳ್ಳಬಾರದು.

ಮನೆಯಲ್ಲಿ ಅಡುಗೆ ಪೂವಾಭಿಮುಖವಾಗಿರಲಿ.

ದಕ್ಷಿಣಕ್ಕೆ ಮುಖ ಮಾಡಿ ಅಡುಗೆ ಮಾಡಿದಲ್ಲಿ ಋಣಾತ್ಮಕ ಚಿಂತನೆಗಳು ಹೆಚ್ಚು. ಖರ್ಚು ಸಹ ಹೆಚ್ಚಾಗಿರುತ್ತದೆ.

ಪಶ್ಚಿಮಕ್ಕೆ ಮುಖ ಮಾಡಿ ಅಡುಗೆ ಮಾಡಿದರೆ ಸಂದಿವಾತಗಳ ಜೊತೆಗೆ ಆರೋಗ್ಯ ಏರುಪೇರಾಗುತ್ತೆ.

ಉತ್ತರಕ್ಕೆ ಮುಖ ಮಾಡಿ ಅಡುಗೆ ಮಾಡುವುದರಿಂದ ಖರ್ಚು ಹೆಚ್ಚು ಜೊತೆಗೆ ಕೈಕಾಲು ನೋವುಗಳು ಕಾಣಿಸಿಕೊಳ್ಳುತ್ತವೆ.

ಉತ್ತರ ಮುಖದ ನಿವೇಶನದವರು ಆಗ್ನೇಯದಲ್ಲಿ ಅಡುಗೆ ಮನೆಯನ್ನು ನಿರ್ಮಿಸಿ ಪೂರ್ವಕ್ಕೆ ಮುಖ ಮಾಡಿ ಅಡುಗೆ ಮಾಡುವಂತೆ ಏರ್ಪಡಿಸಿಕೊಳ್ಳಬೇಕು.

ಪೂರ್ವಮುಖದ ನಿವೇಶನದವರು ವಾಯುವ್ಯ ಭಾಗದಲ್ಲಿ ಅಡುಗೆ ಮನೆಯನ್ನು ನಿರ್ಮಿಸಿ ಪೂರ್ವಕ್ಕೆ ಮುಖಮಾಡಿ ಅಡುಗೆ ಮಾಡುವಂತೆ ಏರ್ಪಡಿಸಿಕೊಳ್ಳಬೇಕು.

ದಕ್ಷಿಣ ಮುಖದ ನಿವೇಶನದವರು ವಾಯುವ್ಯ ಭಾಗದಲ್ಲಿ ಅಡುಗೆ ಮನೆಯನ್ನು ನಿರ್ಮಿಸಿ ಪೂರ್ವಕ್ಕೆ ಮುಖಮಾಡಿ ಅಡುಗೆ ಮಾಡುವಂತೆ ಏರ್ಪಡಿಸಿಕೊಳ್ಳಬೇಕು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
10 ವರ್ಷಗಳ ನಂತರ ಸರಣಿ ಸೋತ ಭಾರತ: ಡಬ್ಲ್ಯೂಟಿಸಿ ಫೈನಲ್ ಗೆ ಆಸ್ಟ್ರೇಲಿಯಾ-ದ.ಆಫ್ರಿಕಾ Police News: 10 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ 16 ವರ್ಷದ ಬಾಲಕ! ನಿವೃತ್ತಿ ನಿರ್ಧಾರ ಮಾಡಿಲ್ಲ, ಪಂದ್ಯದಿಂದ ಅಷ್ಟೇ: ರೋಹಿತ್ ಶರ್ಮಾ ಬಿಸಿಸಿಐಗೆ ಕಾರ್‍ಯದರ್ಶಿಯಾಗಿ ಜೈ ಶಾ ಸ್ಥಾನಕ್ಕೆ ಸೈಕಿಯಾ ಆಯ್ಕೆ? ಡಿಎಂಕೆ ಸಂಸದ ಕತಿರ್ ಆನಂದ್ ದಾಳಿ: ತಮಿಳುನಾಡಿನಲ್ಲಿ ಇಡಿ ಸರಣಿ ದಾಳಿ! ಕಂದಕಕ್ಕೆ ಬಿದ್ದ ಸೇನಾ ವಾಹನ: 4 ಯೋಧರ ದುರ್ಮರಣ ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ FIR ದಾಖಲಿಸಲು ರಾಜ್ಯ ಸರ್ಕಾರದ ಅನುಮತಿ ಅನಗತ್ಯ: ಸುಪ್ರೀಂಕೋರ್ಟ್ ನಟ ದರ್ಶನ್ ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಮುಹೂರ್ತ ಫಿಕ್ಸ್: ವೈದ್ಯ ಅಜಯ್ ಹೆಗ್ಡೆ ಮಾಹಿತಿ ದೆಹಲಿ ಚುನಾವಣೆ ಬಿಜೆಪಿ ಪಟ್ಟಿ ಪ್ರಕಟ: ಕೇಜ್ರಿವಾಲ್​ ವಿರುದ್ಧ ಪರವೇಶ್ ಕಣಕ್ಕೆ ಸ್ಮೈಲಿಂಗ್ ಬುದ್ದ ಖ್ಯಾತಿಯ ಹಿರಿಯ ಅಣು ವಿಜ್ಞಾನಿ ಆರ್.ಚಿದಂಬರಂ ಇನ್ನಿಲ್ಲ