Home ಅಪರಾಧ ಹೊಸ ವರ್ಷ ಪಾರ್ಟಿಗೆ ಹೋದ ಪ್ರಿಯಕರಿಗೆ ಚಾಕು ಇರಿದ ಪ್ರೇಯಸಿ!

ಹೊಸ ವರ್ಷ ಪಾರ್ಟಿಗೆ ಹೋದ ಪ್ರಿಯಕರಿಗೆ ಚಾಕು ಇರಿದ ಪ್ರೇಯಸಿ!

ಮನು ಕುಮಾರ್ ಮಂಗಳವಾರ ಸ್ನೇಹಿತರ ಜೊತೆ ಹೊಸ ವರ್ಷ ಆಚರಿಸಲು ಖಾಸಗಿ ಹೋಟೆಲ್ ನಲ್ಲಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಭವಾನಿ ಪದೇಪದೆ ಫೋನ್ ಮಾಡಿದರೂ ಮನುಕುಮಾರ್ ಸ್ವೀಕರಿಸಿಲ್ಲ.

by Editor
0 comments
hassan lover

ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಪ್ರಿಯಕರನಿಗೆ ಪ್ರೇಯಸಿ ಚಾಕು ಇರಿದ ಘಟನೆ ಹಾಸನದಲ್ಲಿ ನಡೆದಿದೆ.

ನಗರದಲ್ಲಿ ಹಾರ್ಡ್ ವೇರ್ ಮತ್ತು ಪ್ಲೇವುಡ್ ಅಂಗಡಿ ನಡೆಸುತ್ತಿದ್ದ ಮನು ಕುಮಾರ್ (28) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನುಕುಮಾರ್ ಮತ್ತು ಭವಾನಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಮನಸ್ತಾಪದಿಂದ ಬೇರ್ಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನು ಕುಮಾರ್ ಮಂಗಳವಾರ ಸ್ನೇಹಿತರ ಜೊತೆ ಹೊಸ ವರ್ಷ ಆಚರಿಸಲು ಖಾಸಗಿ ಹೋಟೆಲ್ ನಲ್ಲಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಭವಾನಿ ಪದೇಪದೆ ಫೋನ್ ಮಾಡಿದರೂ ಮನುಕುಮಾರ್ ಸ್ವೀಕರಿಸಿಲ್ಲ.

banner

ಮನುಕುಮಾರ್ ಫೋನ್ ರಿಸೀವ್ ಮಾಡಿಲ್ಲ ಎಂದು ಸಿಟ್ಟಿಗೆದ್ದ ಭವಾನಿ ಪಾರ್ಟಿ ನಡೆಯುತ್ತಿದ್ದ ಹೋಟೆಲ್ ಗೆ ಅಲ್ಲೇ ಬಿದ್ದಿದ್ದ ಪಾಸ್ ತೆಗೆದುಕೊಂಡು ಬಂದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಆಗಿದ್ದು, ಸಿಟ್ಟಿಗೆದ್ದ ಭವಾನಿ ಚಾಕುವಿನಿಂದ ಮನುಕುಮಾರ್ ಗೆ ಇರಿದಿದ್ದಳೆ.

ಸ್ಥಳಕ್ಕೆ ಕೆಆರ್ ಪುರಂ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಎಚ್ ಎಂವಿ ವೈರಸ್ ನಿಂದ ಜೀವಕ್ಕೆ ಅಪಾಯವಿಲ್ಲ, ಆತಂಕ ಬೇಡ: ಸಚಿವ ದಿನೇಶ್ ಗುಂಡೂರಾವ್ ಕರ್ನಾಟಕದ 6 ನಕ್ಸಲರು ಶರಣಾಗತಿ? ಕಾರ್ಯಾಚರಣೆ ಸ್ಥಗಿತಕ್ಕೆ ರಾಜ್ಯ ಸರ್ಕಾರ ಆದೇಶ ಗುಜರಾತ್ ನಲ್ಲಿ ಎಚ್ ಎಂಪಿ ವಿ ವೈರಸ್ ಪತ್ತೆ: ಭಾರತಕ್ಕೆ 3ಕ್ಕೇರಿದ ಪ್ರಕರಣ ಅಪಾಯಕಾರಿ ವೈರಸ್ ಅಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಬೆಂಗಳೂರಿನಲ್ಲಿ 2 ಮಕ್ಕಳಲ್ಲಿ HMPV ವೈರಸ್ ಪತ್ತೆ: 3 ತಿಂಗಳ ಮಗು ಡಿಸ್ಚಾರ್ಜ್ ಸತತ 4ನೇ ಶತಕ ಸಿಡಿಸಿದ ಮಾಯಂಕ್: ಕರ್ನಾಟಕಕ್ಕೆ 9 ವಿಕೆಟ್ ಜಯ ಉದ್ಘಾಟನೆಗೆ ಸಜ್ಜಾದ ಕಣಿಗೆ ರಾಜ್ಯದ ವಿಶ್ವದ ಅತಿ ಎತ್ತರದ ರೈಲು! ರಾಹುಲ್, ತೇಜಸ್ವಿ ಬೆಂಬಲ ಕೋರಿದ ಪ್ರಶಾಂತ್ ಕಿಶೋರ್ ಪ್ರಿಯಾಂಕಾ ಕೆನ್ನೆಯಂಥ ರಸ್ತೆ, ತಂದೆ ಬದಲಿಸಿದ ಅತಿಶಿ: ಬಿಜೆಪಿ ನಾಯಕನ ಅವಹೇಳನಕಾರಿ ಹೇಳಿಕೆ