Sunday, May 31, 2026
Google search engine
Homeದೇಶ700 ಅಡಿ ಬೋರ್ ವೆಲ್ ನಿಂದ 10 ದಿನಗಳ ನಂತರ ರಕ್ಷಿಸಿದ್ದ 3 ಬಾಲಕಿ ಸಾವು!

700 ಅಡಿ ಬೋರ್ ವೆಲ್ ನಿಂದ 10 ದಿನಗಳ ನಂತರ ರಕ್ಷಿಸಿದ್ದ 3 ಬಾಲಕಿ ಸಾವು!

ರಾಜಸ್ಥಾನದ ಕೊಟಪುಟಿಲ್ ನಲ್ಲಿ 700 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದು 10 ದಿನಗಳ ನಂತರ ರಕ್ಷಿಸಲಾಗಿದ್ದ ದ್ದಿದ್ದ 3 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸತತ 5 ಬಾರಿ ಪ್ರಯತ್ನಗಳು ವಿಫಲವಾದ ನಂತರ ಬಾಲಕಿ ಚೇತನಾಳನ್ನು ರಕ್ಷಿಸಲಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಕೊಟಪುಟಿಲ್ ಜಿಲ್ಲೆಯ ಕಿರಾತ್ ಪುರ್ ಗ್ರಾಮದ ಬದಿಯಾಲಿ ಕಿ ದಾನಿ ಎಂಬಲ್ಲಿ ಈ ಘಟನೆ ನಡೆದಿದ್ದು, ರಕ್ಷಣಾ ಕಾರ್ಯಾಚರಣೆಗೆ ಮಳೆ ಕೂಡ ಅಡ್ಡಿಪಡಿಸಿತ್ತು.

ಬೋರ್ ವೆಲ್ ಆರಂಭದಲ್ಲಿ 8 ಅಡಿ ಸುತ್ತಳತೆ ಇತ್ತು. ಕೊನೆಯ ಹಂತದಲ್ಲಿ ಮಗುವಿಗೆ ಆಹಾರ, ಉಸಿರಾಟಕ್ಕೆ ಗಾಳಿ ಪೂರೈಸಲು ಕೂಡ ಕಷ್ಟವಾಗಿತ್ತು. ಇದರಿಂದ ಮಗು ಬದುಕುವುದು ಅನುಮಾನವಾಗಿತ್ತು. ಆದರೆ ನಂತರ ಭದ್ರತಾ ಸಿಬ್ಬಂದಿ 12 ಅಡಿಗೆ ವಿಸ್ತರಿಸಿತು. ಹಲವು ಪ್ರಯತ್ನಗಳ ನಂತರ ದೆಹಲಿ ಮತ್ತು ಜೈಪುರ ಮೆಟ್ರೋದವರನ್ನು ಕರೆಸಲಾಯಿತು.

ವೈದ್ಯರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 10 ದಿನಗಳ ಪ್ರಯತ್ನದ ನಂತರವೂ ಬಾಲಕಿ ಮೃತಪಟ್ಟಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments