Home ವಿದೇಶ ಏಷ್ಯಾದಲ್ಲಿ ಭೀತಿ ಹುಟ್ಟಿಸಿದ ಕೋವಿಡ್ ಮಾದರಿ ಚೀನಾದ HMPV ವೈರಸ್!

ಏಷ್ಯಾದಲ್ಲಿ ಭೀತಿ ಹುಟ್ಟಿಸಿದ ಕೋವಿಡ್ ಮಾದರಿ ಚೀನಾದ HMPV ವೈರಸ್!

ಚೀನಾದಲ್ಲಿ ಸೃಷ್ಟಿಯಾಗಿ ಜಗತ್ತನ್ನೇ ಅಲ್ಲೋಕಲ್ಲೋಲ ಮಾಡಿದ ಕೊರೊನಾ ವೈರಸ್ ಮಾದರಿಯ ಮತ್ತೊಂದು ಎಚ್ ಎಂಪಿವಿ ವೈರಸ್ ಏಷ್ಯಾದ ರಾಷ್ಟ್ರಗಳಲ್ಲಿ ಭೀತಿ ಸೃಷ್ಟಿಸಿದೆ.

by Editor
0 comments
china virus

ಚೀನಾದಲ್ಲಿ ಸೃಷ್ಟಿಯಾಗಿ ಜಗತ್ತನ್ನೇ ಅಲ್ಲೋಕಲ್ಲೋಲ ಮಾಡಿದ ಕೊರೊನಾ ವೈರಸ್ ಮಾದರಿಯ ಮತ್ತೊಂದು ಎಚ್ ಎಂಪಿವಿ ವೈರಸ್ ಏಷ್ಯಾದ ರಾಷ್ಟ್ರಗಳಲ್ಲಿ ಭೀತಿ ಸೃಷ್ಟಿಸಿದೆ.

ಚೀನಾದಲ್ಲಿ ಅತ್ಯಂತ ವೇಗವಾಗಿ ಹರುಡುತ್ತಿದ್ದ ಹ್ಯೂಮನ್ ಮೆಟಾಪೆನ್ಯೂಮೂವರ್ಸ್ [HMPV] ವೈರಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ಇದೀಗ ಈ ವೈರಸ್ ಏಷ್ಯಾದ ಇತರೆ ದೇಶಗಳಿಗೂ ಹರಡುವ ಭೀತಿ ಉಂಟಾಗಿದೆ.

ಉತ್ತರ ಚೀನಾದಲ್ಲಿ ಅತ್ಯಂತ ಹೆಚ್ಚು ಹಾವಳಿ ಸೃಷ್ಟಿಸುತ್ತಿರುವ ಎಚ್ ಎಂಪಿವಿ ವೈರಸ್ ಭಾರೀ ಸಮಸ್ಯೆ ಸೃಷ್ಟಿಸಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

ಹ್ಯೂಮನ್ ಮೆಟಾಪೆನ್ಯೂಮೂವರ್ಸ್ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂಬ ಸುದ್ದಿಗಳು ಕೇಳಿ ಬಂದಿವೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

banner

ಅತ್ಯಂತ ಮಾರಕ ವೈರಸ್ ಗಳ ಉತ್ಪಾದನೆಯಲ್ಲಿ ಕುಖ್ಯಾತಿ ಪಡೆದಿರುವ ಚೀನಾದ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದ್ದು, ಇದು ಅದೇ ಮಾದರಿಯ ವೈರಸ್ ಆಗಿರಬಹುದೇ ಸಂಶಯ ಉಂಟಾಗಿದೆ.

ಹೊಸ ಹ್ಯೂಮನ್ ಮೆಟಾಪೆನ್ಯೂಮೂವರ್ಸ್ ವೈರಸ್ ನಿಂದ ಆಸ್ಪತ್ರೆ ತುಂಬಿ ಹೋಗಿದ್ದು, ಭಾರೀ ಪ್ರಮಾಣದಲ್ಲಿ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಚೀನಾ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದ ಕಾರಣ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ.

ಚಳಿಗಾಲದಲ್ಲಿ ಕೆಲವು ಉಸಿರಾಟದ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ. ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ನ್ಯುಮೋನಿಯಾ ಮೇಲ್ವಿಚಾರಣಾ ವ್ಯವಸ್ಥೆಯನ್ನು ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ದೇಶಾದ್ಯಂತ 5ಕ್ಕೇರಿದ ಎಚ್ ಎಂವಿ ವೈರಸ್ ಪ್ರಕರಣ: ಆತಂಕ ಬೇಡ ಎಂದ ಕೇಂದ್ರ ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಟಿಬೆಟ್ ನಲ್ಲಿ 7.1ರಷ್ಟು ತೀವ್ರತೆಯ ಭೂಕಂಪನ: ಭಾರತದಲ್ಲೂ ಕಂಪಿಸಿದ ಭೂಮಿ! ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್: ಗರಿಷ್ಠ 85 ರೂ. ಟಿಕೆಟ್ ದರ ನಿಗದಿ? ಮಾರ್ಚ್ 1-8 ರವರೆಗೆ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಶಾಲೆಯಲ್ಲಿ ಕುಸಿದುಬಿದ್ದ ಅಸುನೀಗಿದ 3ನೇ ತರಗತಿ ವಿದ್ಯಾರ್ಥಿನಿ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದು ಕೋರಿ ಅರ್ಜಿ: ಮುಂದಿನ ವಾರದಿಂದ ಸುಪ್ರೀಂಕೋರ್ಟ್ ವಿಚಾರಣೆ! ರಾಷ್ಟ್ರಗೀತೆ ವಿವಾದ: ಅಧಿವೇಶನ ಭಾಷಣ ಮಾಡದೇ ಹೊರನಡೆದ ತಮಿಳುನಾಡು ರಾಜ್ಯಪಾಲ! BREAKING ಸೇನಾ ವಾಹನ ಸ್ಫೋಟಿಸಿದ ನಕ್ಸಲರು: 9 ಸಿಆರ್ ಪಿಎಫ್ ಯೋಧರು ಹುತಾತ್ಮ 29ನೇ ಹುಟ್ಟುಹಬ್ಬ ಆಚರಿಸಿಕೊಂಡ ಐಐಎಂ ವಿದ್ಯಾರ್ಥಿ ಮಹಡಿಯಿಂದ ಬಿದ್ದು ಸಾವು