Home ತಾಜಾ ಸುದ್ದಿ ಗ್ರಾಹಕರ ದೂರು ತಿಂಗಳಲ್ಲಿ ಇತ್ಯರ್ಥಗೊಳಿಸದಿದ್ದರೆ ಬ್ಯಾಂಕ್ ಗೆ ಬೀಳುತ್ತೆ ದಂಡ!

ಗ್ರಾಹಕರ ದೂರು ತಿಂಗಳಲ್ಲಿ ಇತ್ಯರ್ಥಗೊಳಿಸದಿದ್ದರೆ ಬ್ಯಾಂಕ್ ಗೆ ಬೀಳುತ್ತೆ ದಂಡ!

ನವದೆಹಲಿ: ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ದೂರುಗಳನ್ನು ಕ್ಷಿಪ್ರವಾಗಿ ಇತ್ಯರ್ಥಪಡಿಸಲು ವಿಫಲವಾದರೆ ದಿನದ ಆಧಾರದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

by Editor
0 comments

ನವದೆಹಲಿ: ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ದೂರುಗಳನ್ನು ಕ್ಷಿಪ್ರವಾಗಿ ಇತ್ಯರ್ಥಪಡಿಸಲು ವಿಫಲವಾದರೆ ದಿನದ ಆಧಾರದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಒಂದು ತಿಂಗಳೊಳಗೆ ಗ್ರಾಹಕರ ದೂರುಗಳ ವಿಲೇವಾರಿ ಆಗಬೇಕು. ಒಂದು ವೇಳೆ ಆ ಅವಧಿಯೊಳಗೆ ಸಮಸ್ಯೆ ಇತ್ಯರ್ಥವಾಗದೇ ಹೋದಲ್ಲಿ ದಿನಕ್ಕೆ 100 ರೂ.ನಂತೆ ದಂಡ ವಿಧಿಸಲಾಗುವುದು ಎಂದು ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ.

ಈ ಮಧ್ಯೆ ಬ್ಯಾಂಕುಗಳು ಮಾತ್ರವಲ್ಲದೇ ಕ್ರೆಡಿಟ್ ಇನ್ಫಾರ್ಮೇಶನ್ (ಸಾಲ ಮಾಹಿತಿ) ಕಂಪನಿಗಳಿಗೂ ಈ ನಿಯಮ ಅನ್ವಯ ಆಗುತ್ತದೆ. ಈ ದಂಡದ ಹಣವನ್ನು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ. ಗ್ರಾಹಕರ ಸಮಸ್ಯೆಗಳಿಗೆ ಬ್ಯಾಂಕುಗಳು ಬೇಗ ಸ್ಪಂದಿಸಬೇಕು ಎನ್ನುವ ಉದ್ದೇಶದಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಇದೂ ಅಲ್ಲದೇ ಇನ್ನೂ ಕೆಲ ಮಹತ್ವದ ಕ್ರಮಗಳನ್ನು ಆರ್‌ಬಿಐ ತೆಗೆದುಕೊಂಡಿದೆ. ಸಿಬಿಲ್, ಎಕ್ಸ್ಪೀರಿಯನ್ ಇತ್ಯಾದಿ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು (ಸಿಐಸಿ) ಯಾವುದೇ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದುಕೊಂಡಲ್ಲಿ, ಆ ಬಗ್ಗೆ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮುಖಾಂತರ ಮಾಹಿತಿ ತಿಳಿಸಬೇಕು ಎಂದು ಆರ್‌ಬಿಐ ಅಪ್ಪಣೆ ಮಾಡಿದೆ.

banner

ಬ್ಯಾಂಕುಗಳು ತಮ್ಮ ಗ್ರಾಹಕರು ಒಂದು ವೇಳೆ ಸಾಲ ಮರುಪಾವತಿಸದೇ ಡೀಫಾಲ್ಟ್ ಆಗುತ್ತಿದ್ದರೆ ಆ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಬೇಕು. ಇದನ್ನು 21 ದಿನದೊಳಗೆ ತಿಳಿಸದೇ ಹೋದಲ್ಲಿ ದಿನಕ್ಕೆ 100 ರೂನಂತೆ ಗ್ರಾಹಕರಿಗೆ ಪರಿಹಾರ ಒದಗಿಸಬೇಕಾಗುತ್ತದೆ.

ಸಿಐಸಿ ಅಥವಾ ಗ್ರಾಹಕರು ದೂರು ನೀಡಿದ 21 ದಿನದೊಳಗೆ ಹಣಕಾಸು ಸಂಸ್ಥೆಗಳು ಸಾಲದ ಇತ್ತೀಚಿನ ಮಾಹಿತಿಯನ್ನು ಸಿಐಸಿಗೆ ನೀಡಬೇಕು ಎನ್ನುವ ನಿಯಮ ಇದೆ. ಅದನ್ನು ಪಾಲಿಸದಿದ್ದರೆ ದಂಡ ವಿಧಿಸುವ ಅವಕಾಶ ಇರುತ್ತದೆ.

ಭಾರತದಲ್ಲಿ ಸದ್ಯ ನಾಲ್ಕು ಸಿಐಸಿಗಳು ಕಾರ್ಯನಿರ್ವಹಿಸುತ್ತಿವೆ. ಸಿಬಿಲ್, ಸಿಆರ್‌ಐಎಫ್, ಈಕ್ವಿಫ್ಯಾಕ್ಸ್ ಮತ್ತು ಎಕ್ಸ್ಪೀರಿಯನ್ ಸಂಸ್ಥೆಗಳಿವೆ. ಈ ಸಿಐಸಿಗಳು ಮತ್ತು ಬ್ಯಾಂಕುಗಳು ತಮ್ಮ ಗ್ರಾಹಕರು ನೀಡುವ ದೂರನ್ನು 30 ದಿನದೊಳಗೆ ಇತ್ಯರ್ಥಪಡಿಸಬೇಕು. ದೂರಿನ ಸಂಬಂಧ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಗ್ರಾಹಕರಿಗೆ ಅಪ್ಡೇಟ್ ಮಾಡಬೇಕು.

ಒಂದು ವೇಳೆ ದೂರನ್ನು ತಿರಸ್ಕರಿಸಿದಲ್ಲಿ ಕಾರಣವನ್ನು ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟಿನ ಸೂಚನೆ ನೀಡಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಪರೀಕ್ಷೆ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ! ಮಂಗಳೂರಿನಲ್ಲಿ 3 ವರ್ಷದಿಂದ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆ ಅರೆಸ್ಟ್ ಬೆಂಗಳೂರು ತ್ರಿಬಲ್ ಮರ್ಡರ್ ಕೇಸಲ್ಲಿ ಟ್ವಿಸ್ಟ್: ಹೋಂಗಾರ್ಡ್ ಕೊಂದಿದ್ದು ಪತ್ನಿಯನ್ನಲ್ಲ! ಜ.11ರಿಂದ 3 ದಿನ ಅಯೋಧ್ಯೆ ರಾಮಮಂದಿರ ವಾರ್ಷಿಕೋತ್ಸವ: 100 ಗಣ್ಯರಿಗೆ ಆಹ್ವಾನ ಗ್ರಾಹಕರ ದೂರು ತಿಂಗಳಲ್ಲಿ ಇತ್ಯರ್ಥಗೊಳಿಸದಿದ್ದರೆ ಬ್ಯಾಂಕ್ ಗೆ ಬೀಳುತ್ತೆ ದಂಡ! SHOCKING: 69 ಉಗ್ರರಿರುವ ಜೈಲಿನಲ್ಲಿ ಹಾರಾಡಿದ ಡ್ರೋಣ್: 8 ದಿನಗಳ ನಂತರ ಪತ್ತೆ! 2 ಲಕ್ಷ ಬ್ಯಾಂಕ್ ಉದ್ಯೋಗಕ್ಕೆ ಕತ್ತರಿ ಹಾಕಲಿದೆ ಎಐ! ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಯುವತಿ ಕೊಲೆಗೈದ ಸಹದ್ಯೋಗಿ: ರಕ್ಷಿಸಲು ಬಾರದ ಜನ! ಮದ್ಯಪ್ರಿಯರಿಗೆ ಬಿಗ್ ಶಾಕ್: ಬಿಯರ್ ಬೆಲೆ ಸದ್ದಿಲ್ಲದೇ ಏರಿಕೆ! 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ನೇಮಕ