ದಲಿತ ಕ್ರೀಡಾಪಟು ಮೇಲೆ ಕೋಚ್ ಸೇರಿದಂತೆ 65 ಮಂದಿಯಿಂದ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಕೇರಳ ವಿಶೇಷ ಪೊಲೀಸರು 44 ಮಂದಿಯನ್ನು ಬಂಧಿಸಿದ್ದಾರೆ.
ಎಸ್ ಐಟಿ ಪೊಲೀಸರು ಪತಮ್ಮತಿಟ್ಟ ಜಿಲ್ಲೆಯಲ್ಲಿ ದಲಿತ ಕ್ರೀಡಾಪಟು ಮೇಲೆ 5 ವರ್ಷಗಳ ಕಾಲ ಹಲವಾರು ಮಂದಿ ಅತ್ಯಾಚಾರ ಎಸಗಿದ್ದು, ಡಿಜಿಐ ಎಸ್ ಅಜಿತಾ ಬೇಗಂ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಇದುವರೆಗೆ ಪೊಲೀಸರು 30 ಎಫ್ ಐಆರ್ ದಾಖಲಿಸಿಕೊಂಡಿದ್ದು, 59 ಮಂದಿ ಮೇಲೆ ಆರೋಪ ದಾಖಲಾಗಿದೆ. ಪ್ರಕರಣದಲ್ಲಿ 44 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನು 13 ಮಂದಿಯ ಪತ್ತೆಗೆ ಕಾರ್ಯಾಚರಣೆ ನಡೆದಿದೆ.
ಮಂಡಳಿ ಅಧ್ಯಕ್ಷ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವ ಕುರಿತು ಚಿಂತನೆ ನಡೆದಿದೆ. ಆರೋಪಿಗಳ ವಿರುದ್ಧ ವೈಜ್ಞಾನಿಕ ಸಾಕ್ಷ್ಯ ಸೇರಿದಂತೆ ಪೂರ್ಣ ಪ್ರಮಾಣದ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.



