Thursday, July 2, 2026
Google search engine
Homeಕ್ರೀಡೆ435 ರನ್ ಪೇರಿಸಿ ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ವನಿತೆಯರು!

435 ರನ್ ಪೇರಿಸಿ ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ವನಿತೆಯರು!

ಭಾರತ ವನಿತೆಯರ ತಂಡ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಐರ್ಲೆಂಡ್ ವಿರುದ್ಧ 435 ರನ್ ಕಲೆ ಹಾಕಿದ್ದು, ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ.

ಭಾರತ ಪ್ರವಾಸ ಕೈಗೊಂಡಿರುವ ಐರ್ಲೆಂಡ್ ವಿರುದ್ಧ ಬುಧವಾರ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಕಲೆ ಹಾಕಿತು.

ಇಬ್ಬರು ಆರಂಭ ಆಟಗಾರ್ತಿಯರು ಶತಕ ಸಿಡಿಸಿ ಮತ್ತೊಂದು ವಿಕ್ರಮ ಸಾಧಿಸಿದರು. ನಾಯಕಿ ಸ್ಮೃತಿ ಮಂದಾನ 80 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 135 ರನ್ ಚಚ್ಚಿದರೆ, ಪ್ರತಿಕಾ ರಾವಲ್ 129 ಎಸೆತಗಳಲ್ಲಿ 20 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 154 ರನ್‌ ಚಚ್ಚಿದರು.

ಸ್ಮೃತಿ ಮಂದಾನ ಮತ್ತು ಪ್ರತಿಕಾ ಮೊದಲ ವಿಕೆಟ್ ಗೆ 26.4 ಓವರ್ ಗಳಲ್ಲಿ 233 ರನ್ ಜೊತೆಯಾಟದಿಂದ ಮತ್ತೊಂದು ದಾಖಲೆ ಬರೆದಿದ್ದೂ ಅಲ್ಲದೇ ಭಾರತ ವಿಶ್ವದಾಖಲೆಯ ಮೊತ್ತ ದಾಖಲಿಸುವ ಭರವಸೆ ಮೂಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments