Home ಮನರಂಜನೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ: 7 ಪೊಲೀಸ್ ತಂಡದಿಂದ ತನಿಖೆ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ: 7 ಪೊಲೀಸ್ ತಂಡದಿಂದ ತನಿಖೆ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದುಷ್ಕರ್ಮಿ ಚಾಕು ಇರಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ದಾಳಿಕೋರನ ಪತ್ತೆಗೆ 7 ಪೊಲೀಸರ ತಂಡ ಹಾಗೂ ಶ್ವಾನದಳ ನಿಯೋಜಿಸಲಾಗಿದೆ.

by Editor
0 comments
saif ali khan

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದುಷ್ಕರ್ಮಿ ಚಾಕು ಇರಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ದಾಳಿಕೋರನ ಪತ್ತೆಗೆ 7 ಪೊಲೀಸರ ತಂಡ ಹಾಗೂ ಶ್ವಾನದಳ ನಿಯೋಜಿಸಲಾಗಿದೆ.

ಗುರುವಾರ ಮುಂಜಾನೆ ಮನೆಗೆ ನುಗ್ಗಿದ ದುಷ್ಕರ್ಮಿ ಸೈಫ್ ಅಲಿ ಖಾನ್ ಗೆ ಚಾಕು ಇರಿದಿದ್ದು, 6 ಕಡೆ ಗಾಯಗಳಾಗಿವೆ. ಕೂಡಲೇ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ದಾಳಿ ಬೆನ್ನಲ್ಲೇ ಸೈಫ್ ಅಲಿ ಖಾನ್ ಮನೆಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಯ ಪತ್ತೆ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.

ದಾಳಿಗೂ ಮುನ್ನ 2 ಗಂಟೆಯ ಅವಧಿಯ ಸಿಸಿಟಿವಿ ಪರಿಶೀಲಿಸಲಾಗಿದ್ದು, ಯಾವುದೇ ವ್ಯಕ್ತಿ ಅಕ್ರಮವಾಗಿ ಮನೆ ಪ್ರವೇಶಿಸಿಲ್ಲ. ಇದರಿಂದ ದಾಳಿ ಮಾಡಿದ ವ್ಯಕ್ತಿ ಮನೆಯವರಿಗೆ ಪರಿಚಿತನೇ ಆಗಿದ್ದು, ಕೆಲಸ ಮಾಡುವವರಲ್ಲಿ ಒಬ್ಬರಾಗಿರಬಹುದು ಎಂದು ಶಂಕಿಸಲಾಗಿದೆ.

banner

ದುಷ್ಕರ್ಮಿ ಮೊದಲೇ ಮನೆಯೊಳಗೆ ಪ್ರವೇಶಿಸಿ ಅಡಗಿಕೊಂಡಿದ್ದು, ಸಮಯ ನೋಡಿ ದಾಳಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ತನಿಖೆಗೆ 7 ಪೊಲೀಸರ ತಂಡ ಹಾಗೂ ಶ್ವಾನದಳ ನಿಯೋಜಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೈಫ್ ಅಲಿ ಖಾನ್ ಆಸ್ಪತ್ರೆಯಲ್ಲಿ ಇರುವುದರಿಂದ ಅವರ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಅವರು ಚೇತರಿಸಿಕೊಂಡ ನಂತರ ನೀಡುವ ಹೇಳಿಕೆ ಮೇಲೆ ತನಿಖೆ ಮತ್ತಷ್ಟು ಚುರುಕಾಗಲಿದ್ದು, ಆರೋಪಿ ಪತ್ತೆ ಸುಲಭವಾಗಲಿದೆ ಎಂದು ಹೇಳಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
RCB ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿ ಜನಪ್ರಿಯತೆಯಲ್ಲಿ ನಂ.1 8ನೇ ವೇತನ ಆಯೋಗ ರಚನೆಗೆ ಕೇಂದ್ರ ಸಚಿವ ಸಂಪುಟ ಅಸ್ತು ಪ್ರೀತಿಸುವಂತೆ ಬಾಲಕರ ಕಿರುಕುಳ: 15 ವರ್ಷದ ಬಾಲಕಿ ಆತ್ಮಹತ್ಯೆ ಬೀದರ್ ನಲ್ಲಿ ಹಾಡುಹಗಲೇ ಗುಂಡು ಹಾರಿಸಿ 83 ಲಕ್ಷ ರೂ. ಎಟಿಎಂ ಹಣ ದರೋಡೆ: ಇಬ್ಬರು ಸಿಬ್ಬಂದಿ ಸಾವು 6 ಬಾರಿ ಇರಿತಕ್ಕೆ ಒಳಗಾಗಿದ್ದ ಸೈಫ್ ಅಲಿ ಖಾನ್ ಆಟೋದಲ್ಲಿ ಆಸ್ಪತ್ರೆಗೆ ದಾಖಲು! ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ: 7 ಪೊಲೀಸ್ ತಂಡದಿಂದ ತನಿಖೆ ಹಾಡುಹಗಲೇ ಎಟಿಎಂ ವಾಹನದ ಮೇಲೆ ಗುಂಡು ಹಾರಿಸಿ ದರೋಡೆ: ಸಿಬ್ಬಂದಿ ಸ್ಥಳದಲ್ಲೇ ಸಾವು ಮನೆಯೊಂದು ಮೂರು ಬಾಗಿಲು ಆದ ಭಾರತ ತಂಡ! ಬಣ್ಣ ಬದಲಿಸುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಪದಕ: ಮನು ಭಾಕರ್‌ ಗೆ ಹೊಸ ಪದಕ! ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಜೈಲಿಗೆ ಹಾಕಿ: ರಾಹುಲ್ ಗಾಂಧಿ ಕಿಡಿ