Friday, November 7, 2025
Google search engine
Homeದೇಶಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತ ಹೊಸ ಮೈಲುಗಲ್ಲು!

ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತ ಹೊಸ ಮೈಲುಗಲ್ಲು!

ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಭಾರತ ರಕ್ಷಣಾ ವಲಯದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಐಎನ್ ಎಸ್ ಹರಿಹಂತ್ ಜಲಾಂತಾರ್ಗಾಮಿಯಿಂದ ಭಾರತೀಯ ನೌಕಾಪಡೆ ಬುಧವಾರ ೩೫೦೦ ಕಿ.ಮೀ. ದೂರ ಚಿಮ್ಮಿಬಲ್ಲ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

ಕೆ-೪ ಕ್ಷಿಪಣಿಯನ್ನು ಭಾರತ ನೌಕಾಪಡೆ ಪರೀಕ್ಷೆಗೊಳಪಡಿಸಿದ್ದು, ಇನ್ನಷ್ಟು ಶಸ್ತ್ರಾಸ್ತ್ರಗಳ ಪರೀಕ್ಷೆಗಳು ನಡೆಯಲಿವೆ ಎಂದು ನೌಕಾಪಡೆ ಸೂಚನೆ ನೀಡಿದೆ.

ಪ್ರಸ್ತುತ ಭಾರತದ ಬಳಿ ಎರಡು ಜಲಾಂತರ್ಗಾಮಿಗಳಿದ್ದು, ವಿಶಾಖಪಟ್ಟಣದ ಬಂದರಿನಲ್ಲಿ ನೆಲೆ ನಿಂತಿವೆ. ಇನ್ನೆರಡು ಜಲಾಂತರ್ಗಾಮಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments