Kannadavahini

ಬಾರಿಸು ಕನ್ನಡ ಡಿಂಡಿಮವ

ತಾಜಾ ಸುದ್ದಿ ಮನರಂಜನೆ

15 ವರ್ಷದ ನನ್ನ ಶಪಿಸುವುದರಿಂದ ಏನೂ ಬದಲಾಗಲ್ಲ: ದರ್ಶನ್ ಪುತ್ರ ವಿನೀತ್ ಪೋಸ್ಟ್ ವೈರಲ್!

15 ವರ್ಷದ ನನ್ನನ್ನೂ ಪರಿಗಣಿಸದೇ ನನ್ನನ್ನು ಶಪಿಸುವುದರಿಂದ ಏನೂ ಬದಲಾಗುವುದಿಲ್ಲ ಎಂದು ನಟ ದರ್ಶನ್ ಪುತ್ರ ವಿನೀತ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ​ವುಡ್ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಕೈವಾಡದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ನಿಂದನೆಗಳು ಆರಂಭವಾಗಿದೆ. ಅದರಲ್ಲೂ ದರ್ಶನ್ ಪುತ್ರ ವಿನೀತ್ ಅವರಿಗೂ ಕೆಟ್ಟ ಕಮೆಂಟ್ ಬರುತ್ತಿವೆ.

ಕೆಟ್ಟ ಸಂದೇಶಗಳ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮೀ ಇನ್ ಸ್ಟಾಗ್ರಾಂನಲ್ಲಿ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದೂ ಅಲ್ಲದೇ ಡಿಪಿ ಡಿಲಿಟ್ ಮಾಡಿದ್ದರು. ಇದೀಗ ಇನ್ ಸ್ಟಾಗ್ರಾಂನಿಂದ ಹೊರ ನಡೆದಿದ್ದಾರೆ.

ಈ ಎಲ್ಲಾ ಘಟನೆಗಳ ನಡುವೆ ದರ್ಶನ್- ವಿಜಯಲಕ್ಷ್ಮೀಯ ಪುತ್ರ ವಿನೀತ್ ಸಾಮಾಜಿಕ ಜಾಲತಾಣದಲ್ಲಿ ಇಂಗ್ಲೀಷ್ ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು. ನನ್ನ ತಂದೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ನೀವು 15 ವರ್ಷದ ಮಗನನ್ನ ಪರಿಗಣಿಸಲೆ ಇಲ್ಲ. ನನ್ನ ಭಾವನೆಗಳಿಗೆ ಬೆಲೆ ಕೊಡದ ನೀವು ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ಬೆಂಬಲದ ಅಗತ್ಯವಿರುವಾಗ ನನ್ನನ್ನು ಶಪಿಸುವುದರಿಂದ ಏನೂ ಬದಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

LEAVE A RESPONSE

Your email address will not be published. Required fields are marked *