Wednesday, October 16, 2024
Google search engine
Homeತಾಜಾ ಸುದ್ದಿ2 ಕೋಟಿ ಬೆಲೆಯ ಚಿನ್ನ ಧರಿಸಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಗೋಲ್ಡನ್ ಸುರೇಶ್:...

2 ಕೋಟಿ ಬೆಲೆಯ ಚಿನ್ನ ಧರಿಸಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಗೋಲ್ಡನ್ ಸುರೇಶ್: 2 ಗನ್ ಮ್ಯಾನ್, 4 ಬಾಡಿಗಾರ್ಡ್ಸ್ ಬೆಂಗಾವಲು!

ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿಕೊಂಡು ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 11ರ ಮನೆಗೆ ಬೆಳಗಾವಿಯ ಗೋಲ್ಡನ್ ಸುರೇಶ್ ಪ್ರವೇಶಿಸಿದ್ದಾರೆ.

ಭಾನುವಾರ ಆರಂಭಗೊಂಡ ಬಿಗ್ ಬಾಸ್ ಸೀಸನ್ 11ರ ಮನೆಗೆ ಗೋಲ್ಡನ್ ಸುರೇಶ್ ಪ್ರವೇಶಿಸಿದ್ದು, 1.28 ಲಕ್ಷ ಮತಗಳೊಂದಿಗೆ ನರಕದ ಮನೆಗೆ ಪ್ರವೇಶ ಪಡೆದಿದ್ದಾರೆ.

ಗೋಲ್ಡನ್ ಸುರೇಶ್ ಅವರನ್ನು ವೇದಿಕೆಗೆ ಆಹ್ವಾನಿಸಿದ ಕಿಚ್ಚ ಸುದೀಪ್ ಸ್ವತಃ ಆಶ್ಚರ್ಯ ಚಕಿತರಾಗಿದ್ದು, ನಿಮ್ಮ ತೂಕ ಎಷ್ಟು ಅಂದರೆ 75 ಕೆಜಿ ಅಂತ ಸುರೇಶ್ ಉತ್ತರಿಸಿದ್ದಾರೆ. ಚಿನ್ನ ತೆಗೆದಿಟ್ಟರೆ ನಿಮ್ಮ ತೂಕ ಎಷ್ಟು ಅಂದರೆ 72 ಕೆಜಿ ಅಂದಾಗ, ಸುದೀಪ್ ಅಂದರೆ 3 ಕೆಜಿಯಷ್ಟು ಚಿನ್ನ ಮೈಮೇಲೆ ಇರುತ್ತಾ ಎಂದು ಪ್ರಶ್ನಿಸಿದಾಗ ಹೌದು ಎಂದು ಉತ್ತರಿಸಿದರು.

ಮೈಮೇಲೆ ಒಂದೂವರೆಯಿಂದ ಎರಡು ಕೋಟಿ ಮೌಲ್ಯದ ಚಿನ್ನ ಇದೆ ಎಂದು ಸುರೇಶ್ ಹೇಳಿದಾಗ, ಮನೆಯಲ್ಲಿ ಇಟ್ಟ ಚಿನ್ನವನ್ನೇ ಕದಿಯುತ್ತಾರೆ. ಹಾಗಿದ್ದ ಮೇಲೆ ಇಷ್ಟು ಚಿನ್ನ ಧರಿಸಿ ಹೇಗೆ ಓಡಾಡುತ್ತೀರಿ ಅಂತ ಕೇಳಿದಾಗ ಇಬ್ಬರು ಗನ್ ಮ್ಯಾನ್ ಹಾಗೂ ನಾಲ್ವರು ಬಾಡಿಗಾರ್ಡ್ ಇದ್ದಾರೆ ಅಂದಾಗ ಸ್ವತಃ ಸುದೀಪ್ ಅಚ್ಚರಿಗೆ ಒಳಗಾಗಿ ಅವರನ್ನು ವೇದಿಕೆಗೆ ಆಹ್ವಾನಿಸಿದರು.

ವೇದಿಕೆಗೆ ಬಾಡಿಗಾರ್ಡ್ ಗಳನ್ನು ನೋಡಿದ ನಂತರ ನನ್ನ ಬಾಡಿಗಾರ್ಡ್ ಗಳು ಎಲ್ಲಿದ್ದಿರಪ್ಪಾ ಎಂದು ಹೇಳಿದಾಗ ಎಲ್ಲರೂ ಬಿದ್ದು ಬಿದ್ದು ನಕ್ಕರು. ಮತದಾರರ ಪ್ರಕಾರ ಸುರೇಶ್ ಬಿಗ್ ಬಾಸ್ ಮನೆಗೆ ನರಕದ ಮನೆ ಪ್ರವೇಶಿಸಿದರು.

ನರಕದ ಮನೆಗೆ ಪ್ರವೇಶಿಸಿದಾಗ ಇತರೆ ಸ್ಪರ್ಧಿಗಳು ನಿಜವಾದ ಬಂಗಾರನಾ ಎಂದು ಪ್ರಶ್ನಿಸಿದರು. ಆಗ ಕಷ್ಟಪಟ್ಟು ಗಳಿಸಿದ ಬಂಗಾರ ಇದು. ಸಾಮಾನ್ಯ ರೈತನ ಮಗ ಅದರಲ್ಲೂ ಉತ್ತರ ಕರ್ನಾಟಕದ ಜನತೆಗೆ ಸ್ಪೂರ್ತಿ ಆಗಲಿ ಎಂದು ಬಿಗ್ ಬಾಸ್ ಮನೆಗೆ ಬಂದಿದ್ದೇನೆ. ಜನ ನಾನು ಹೀಗೆ ಇರಬೇಕು ಎಂದು ಬಯಸುತ್ತಾರೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments