Saturday, 31 October 2026 — Kannadavahini
BREAKING NEWS
ಬೆಂಗಳೂರು ಬೆಂಗಳೂರಿನಲ್ಲಿ ಘೋರ ದುರಂತ: ಪಂಚತಾರಾ ಹೋಟೆಲ್‌ ಈಜುಕೊಳದಲ್ಲಿ ಕರೆಂಟ್‌ ಹೊಡೆದು ಇಬ್ಬರು ವಿದೇಶಿಯರ ಸಾವು ಮನರಂಜನೆ ಇಂದಿನಿಂದ 3 ದಿನ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ! ರಾಜ್ಯ ಹಾಸನಾಂಬೆ ಗರ್ಭಗುಡಿ ಓಪನ್: ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ರಾಜ್ಯ ನ.1ರಿಂದ ಹಾಲು, ಸಾರಿಗೆ ದರ ಏರಿಕೆ: ದೀಪಾವಳಿಗೆ ರೈತರಿಗೆ ಸಿಹಿ, ಜನರಿಗೆ ದುಬಾರಿ! ಅಪರಾಧ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ: ಸಿಸಿಬಿ ತನಿಖೆಯಲ್ಲಿ ಪತ್ತೆ ರಾಜ್ಯ ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಬೆಂಗಳೂರು ಬೆಂಗಳೂರಿನಲ್ಲಿ ಘೋರ ದುರಂತ: ಪಂಚತಾರಾ ಹೋಟೆಲ್‌ ಈಜುಕೊಳದಲ್ಲಿ ಕರೆಂಟ್‌ ಹೊಡೆದು ಇಬ್ಬರು ವಿದೇಶಿಯರ ಸಾವು ಮನರಂಜನೆ ಇಂದಿನಿಂದ 3 ದಿನ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ! ರಾಜ್ಯ ಹಾಸನಾಂಬೆ ಗರ್ಭಗುಡಿ ಓಪನ್: ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ರಾಜ್ಯ ನ.1ರಿಂದ ಹಾಲು, ಸಾರಿಗೆ ದರ ಏರಿಕೆ: ದೀಪಾವಳಿಗೆ ರೈತರಿಗೆ ಸಿಹಿ, ಜನರಿಗೆ ದುಬಾರಿ! ಅಪರಾಧ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ: ಸಿಸಿಬಿ ತನಿಖೆಯಲ್ಲಿ ಪತ್ತೆ ರಾಜ್ಯ ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ
ದೇಶ

ಕ್ರಿಕೆಟಿಗ ರಿಷಭ್ ಪಂತ್ ರಕ್ಷಿಸಿದ್ದ ಯುವಕ ಆತ್ಮಹತ್ಯೆಗೆ ಯತ್ನ: ಪ್ರೇಯಸಿ ಸಾವು!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು 4 ವೀಕ್ಷಣೆಗಳು
rishab pant
rishab pant

ಅಪಘಾತಕ್ಕೊಳಗಾಗಿದ್ದ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದ ಯುವಕ ಗೆಳತಿ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮುಜಾಫರ್ ನಗರದ ಬುಚ್ಚಾ ಬಸ್ತಿ ಗ್ರಾಮದಲ್ಲಿ ರಜತ್ ಕುಮಾರ್ (25) ಹಾಗೂ ಗೆಳತಿ ಮನು ಕಶ್ಯಪ್ (21) ಆತ್ಮಹತ್ಯೆಗೆ ಯತ್ನಿಸಿದ್ದು, ಗೆಳತಿ ಮೃತಪಟ್ಟಿದ್ದಾಳೆ. ರಜತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.

ಪ್ರೇಮಿಗಳ ಜಾತಿ ಬೇರೆ ಬೇರೆ ಆಗಿದ್ದು, ಎರಡೂ ಕುಟುಂಬಗಳು ಮದುವೆಗೆ ನಿರಾಕರಿಸಿದ್ದರು. ಅಲ್ಲದೇ ಬೇರೋಬ್ಬರ ಜೊತೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ನೊಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮನು ಕಶ್ಯಪ್ ತಾಯಿ ಮಗಳನ್ನು ರಜತ್ ಕಿಡ್ನಾಪ್ ಮಾಡಿ ವಿಷ ಹಾಕಿ ಕೊಂದಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

2022ರಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದ ರಿಷಭ್ ಪಂತ್ ಅವರನ್ನು ರಜತ್ ಕುಮಾರ್ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದ. ಚೇತರಿಸಿಕೊಂಡ ನಂತರ ಪಂತ್ ಅವರನ್ನು ಕರೆದು ಸನ್ಮಾನಿಸಿದ್ದರು. ಅಲ್ಲದೇ ಅವರ ಸಾಹಸಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

ಉತ್ತರಾಖಂಡ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಿಷಭ್ ಪಂತ್ ಅಪಘಾತಕ್ಕೆ ಒಳಗಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಜತ್ ಮತ್ತು ಸ್ನೇಹಿತ ಕೂಡಲೇ ಕಾರಿನ ಬಳಿ ಧಾವಿಸಿ ಪಂತ್ ಅವರನ್ನು ನಜ್ಜುಗುಜ್ಜಾದ ಕಾರಿನಿಂದ ರಕ್ಷಿಸಿದ್ದರು. ಈ ಸಾಹಸಕ್ಕಾಗಿ ಪಂತ್ ಇಬ್ಬರಿಗೂ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8397 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment